‘ಬಾಂಬೆ ಬಾಯ್ಸ್’ ಸುದ್ದಿ | ‘ಸುವರ್ಣ ಚಾನೆಲ್’ ವಿರುದ್ಧ ಕೆ ಎಸ್ ಈಶ್ವರಪ್ಪ ಕಿಡಿ

Date:

Advertisements

‘ಬಿಜೆಪಿಯಲ್ಲಿ ಸದ್ಯ ಅಶಿಸ್ತು ಮೂಡಲು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದವರು’ ಕಾರಣ ಎಂಬ ಹೇಳಿಕೆಯ ಬಗ್ಗೆ ‘ಬಾಂಬೆ ಬಾಯ್ಸ್’ ಎಂದು ತಪ್ಪಾಗಿ ಉಲ್ಲೇಖ ಮಾಡಿ ಪ್ರಸಾರ ಮಾಡಲಾಗಿದೆ ಎಂದು ‘ಸುವರ್ಣ ಚಾನೆಲ್’ ವಿರುದ್ಧ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಬಹಿರಂಗವಾಗಿ ಕಿಡಿಕಾರಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಬುಧವಾರ ಮಾತನಾಡಿರುವ ಅವರು, “ನಾನು ಮತ್ತು ಸಂಸದರಾದ ಪ್ರಲ್ಹಾದ್ ಜೋಶಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೆವು. ಆದರೆ ಪತ್ರಿಕಾಗೋಷ್ಠಿ ಮುಗಿಸಿ ಪ್ರವಾಸಿ ಮಂದಿರಕ್ಕೆ ಹೋದಾಗ ‘ಸುವರ್ಣ ಚಾನೆಲ್’ನಲ್ಲಿ ‘ಬಾಂಬೆ ಬಾಯ್ಸ್ ವಿರುದ್ಧ ಈಶ್ವರಪ್ಪ ಗರಂ’ ಎಂಬ ಸುದ್ದಿ ಪ್ರಸಾರವಾಗುವುದು ಗಮನಿಸಿದೆ. ಟಿವಿಗಳಲ್ಲಿ ಏನು ಬೇಕಾದರೂ ಬರೆಯಬಹುದು ಎಂಬುದು ನೋಡಿ ನನಗೆ ಆಶ್ವರ್ಯವಾಯಿತು. ನಾನು ಅಲ್ಲಿ ಬಾಂಬೆ ಬಾಯ್ಸ್ ಅಂತ ಪ್ರಸ್ತಾಪ ಮಾಡಿದ್ದನ್ನು ತೋರಿಸಲಿ. ನಾನು ಸಂತೋಷಪಡುತ್ತೇನೆ. ಆದರೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ” ಎಂದರು.

ಆ ಬಳಿಕ ಸಂಬಂಧಪಟ್ಟ ಹುಬ್ಬಳ್ಳಿಯ ವರದಿಗಾರನಿಗೆ ಕರೆ ಮಾಡಿ ಕೇಳಿದಾಗ, ನಾನು ಆ ಥರ ಕಳಿಸಿಲ್ಲ. ಮುಖ್ಯ ಕಚೇರಿಯಿಂದ ಹಾಗೆ ವರದಿ ಮಾಡುತ್ತಿದ್ದಾರೆ ಎಂದುತ್ತರಿಸಿದರು. ಆ ಬಳಿಕ ಸುವರ್ಣ ಚಾನೆಲ್‌ನ ಉನ್ನತ ಹುದ್ದೆಯಲ್ಲಿರುವವರಿಗೆ ತಿಳಿಸಿದಾಗ, ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು. ಅವರು ಬದಲಾವಣೆ ಮಾಡುವ ವೇಳೆಗೆ ಇಡೀ ರಾಜ್ಯದ ಜನ ನೋಡಿಯಾಗಿತ್ತು. ಅಲ್ಲದೇ, ‘ಬಾಂಬೆ ಬಾಯ್ಸ್’ ಸುದ್ದಿಯಿಂದ ಬಿಜೆಪಿಗೆ ಬಂದಂತಹ 17 ಜನ ಶಾಸಕರಿಗೂ ಕೂಡ ನೋವಾಗಿದೆ. ನನಗೂ ನೋವಾಯಿತು. ಅವರು ನಮಗೆ ಸಹಕಾರ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ಕೂಡ ಬಂತು. ನಾನೂ ಕೂಡ ಮಂತ್ರಿಯಾದೆ. ಆದರೆ, ಅವರ ಬಗ್ಗೆ ಆಪಾದನೆ ಮಾಡಿ ಸುದ್ದಿ ಹರಡಿರುವುದು ನೋವಾಗಿದೆ ಎಂದು ಈಶ್ವರಪ್ಪ ಸಮಜಾಯಿಷಿ ನೀಡಿದರು.

Advertisements

ಈ ಸಂಬಂಧ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಫೋನ್ ಮಾಡಿ ತಿಳಿಸಿದೆ. ಬಳಿಕ ಪಕ್ಷದ ಕಾರ್ಯಕರ್ತರ ಸಭೆಗೆ ಹೋದಾಗ, ಅಲ್ಲಿ ಸುವರ್ಣ ಚಾನೆಲ್‌ನ ವರದಿಗಾರರಿದ್ದರು. ಅವರಲ್ಲಿ ನನ್ನ ಸ್ಪಷ್ಟೀಕರಣ ಹಾಕುವಂತೆ ವಿನಂತಿಸಿದೆ. ಆದರೆ ಅವರು ವಿಡಿಯೋ ಮಾಡಲಿಲ್ಲ. ನಾನು ಅಲ್ಲಿ ‘ಬಾಂಬೆ ಬಾಯ್ಸ್‌’ ಎಂದು ಪ್ರಸ್ತಾಪವೇ ಮಾಡಿಲ್ಲ. ಕಾಂಗ್ರೆಸ್‌ನ ಗಾಳಿ ನಮಗೂ ಬೀಸಿ, ಸ್ವಲ್ಪ ಅಶಿಸ್ತು ಉಂಟಾಗಿದೆ ಎಂದಷ್ಟೇ ಹೇಳಿದ್ದೆ. ಆದ್ದರಿಂದ ಇಂತಹ ಸುದ್ದಿಗಳು ಪ್ರಸಾರ ಮಾಡುವುದರಿಂದ ನಮ್ಮೊಳಗಡೆ ಗೊಂದಲ ಉಂಟಾಗುತ್ತದೆ. ಆದ್ದರಿಂದ ಹೇಳದೇ ಇರುವ ಹೇಳಿಕೆಗಳನ್ನು ಪ್ರಸಾರ ಮಾಡಬೇಡಿ’ ಎಂದು ‘ಸುವರ್ಣ ಚಾನೆಲ್‌’ನ ಹೆಸರೆತ್ತಿ ಹೇಳಿಕೆ ನೀಡಿದ್ದಾರೆ.

“ಬಿಜೆಪಿಯಲ್ಲಿ ಸದ್ಯ ಅಶಿಸ್ತು ಮೂಡಿದೆ, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸಿಗರು ಬಂದ ನಂತರ ಪಕ್ಷದಲ್ಲಿ ಅಲ್ಪಸ್ವಲ್ಪ ಅಶಿಸ್ತು ಮೂಡಿದೆ” ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X