ಶಿವಮೊಗ್ಗ ಪೊಲೀಸರು ಭದ್ರಾವತಿ ತಾಲ್ಲೂಕುನಲ್ಲಿ ಮತ್ತೊಂದು ಪೊಲೀಸ್ ಫೈರ್ ನಡೆಸಿದ್ದು, ಆರೋಪಿಯೊಬನ್ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಂಜಾ ಪೆಡ್ಲರ್ ನಜ್ರುಲ್ಲಾನನ್ನು ಹಿಡಿಯಲು ಹೋಗಿದ್ದ ಪಿಎಸ್ಐ ಚಂದ್ರಶೇಖರ್ ಆ್ಯಂಡ್ ಟೀಂ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ನಸ್ರುಲ್ಲಾ ಅಲಿಯಾಸ್ ನಸ್ರು ಎಂಬ 21 ವರ್ಷದ ಪೆಡ್ಲರ್ ಗುಂಡೇಟು ತಿಂದ ಆರೋಪಿ. ಈತನ ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ. ಐದು ಕೇಸ್ಗಳಲ್ಲಿ ಬೇಕಾಗಿದ್ದ ಈ ಆರೋಪಿಯನ್ನು ಹಿಡಿಯಲು ಹೋಗಿದ್ದ ಪೊಲೀಸರ ಮೇಲೆ ನಸ್ರು ಹಲ್ಲೆ ಮಾಡಿದ್ದಾನೆ. ಹೀಗಾಗಿ ಪೊಲೀಸರು ಕಾಲಿಗೆ ಗುಂಡೇಟು ನೀಡಿದ್ದಾರೆ.

ಇನ್ನೂ ನಿನ್ನೆ ದಿನ ಓಲ್ಡ್ ಟೌನ್ ಪೊಲೀಸ್ ಠಾಣೆ ಪೊಲೀಸರು ಸುಮಾರು 1.4 ಕೆಜಿ ಗಾಂಜಾದ ಜೊತೆಗೆ ನಾಲ್ವರು ಆರೋಪಿಗಳನ್ನು ಹಿಡಿದಿದ್ದರು. ಈ ವೇಳೆ ನಸ್ರು ಎಸ್ಕೇಪ್ ಆಗಿದ್ದ. ಇವತ್ತು ಮುಂಜಾನೆ ಓಲ್ಡ್ ಟೌನ್ ಪೊಲೀಸರು, ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಡಗಿದ್ದ ನಸ್ರುಗಾಗಿ ಟ್ರ್ಯಾಪ್ ರೂಪಿಸಿದ್ದರು.
ಅದರಂತೆ ಆರೋಪಿಯನ್ನು ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ನಸ್ರು ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಡ್ರ್ಯಾಗರ್ನಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾನೆ. ಈ ವೇಳೆ ಮೌನೇಶ್ ಎಂಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಆರೋಪಿ ಕಂಟ್ರಿಮೇಡ್ ಪಿಸ್ತೂಲ್ ಬಳಸುತ್ತಿದ್ದಂತೆ ಓಲ್ಡ್ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಬುಲೆಟ್ ಫೈರ್ ಮಾಡಿ ಆರೋಪಿಯನ್ನು ಹಿಡಿದಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದಾರೆ.