ರೈತರ ಜಮೀನುಗಳ ದಾಖಲೆಗಳನ್ನ ರದ್ದು ಮಾಡಲು ನೋಟೀಸ್ ಕೊಟ್ಟಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಭೆ ನಡೆಸಲಾಗಿದೆ.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿವಿಧೆಡೆ ಜಮೀನು ಮಂಜೂರು ಮಾಡಿದ್ದು, ಕಂದಾಯ, ಗೋಮಾಳ, ಹುಲ್ಲುಬನ್ನಿ, ಕರಾಬು ಜಮೀನುಗಳಲ್ಲಿ ಇತರೆಯವರಿಗೂ ಜಮೀನು ಮಂಜೂರು ಮಾಡಿದ್ದು ಸುಮಾರು 60-70 ವರ್ಷಗಳಿಂದಲೂ ಸರ್ಕಾರದಿಂದ ಹಕ್ಕುಪತ್ರ ಪಡೆದರೂ ಕಂದಾಯ ಮತ್ತು ಅರಣ್ಯ ಇಲಾಖೆಗಳು ನೋಟೀಸ್ ನೀಡಿ ಒಕ್ಕಲೇಳುವಂತೆ ತಿಳಿಸಿದೆ.

ನೋಟೀಸ್ ನಿಡುವುದನ್ನ ನಿಲ್ಲಿಸಬೇಕು. ರೈತರ ದಾಖಲೆಗಳನ್ನ ವಜಾ ಮಾಡಬಾರದು. ಸಾಗುವಳಿ ರೈತರಿಗೆ ತಕ್ಷಣವೇ ಹಕ್ಕುಪತ್ರ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಳಿಗ್ಗೆ 11-30 ರಂದು ಸೈನ್ಸ್ ಮೈದಾನದಿಂದ ಪ್ರತಿಭಟನ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಪ್ರತಿಭಟನಾಕಾರರು ನಂತರ ಡಿಸಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ,ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಇನ್ನಿತರೆ ಮುಖಂಡರುಗಳು ಉಪಸ್ಥಿತರಿದ್ದರು.