ಕೊಡಗು ಜಿಲ್ಲೆಯಲ್ಲಿ ಸರಾಸರಿ 21.33 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 17.93 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ ಮಳೆ 289.65 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 648.24 ಮಿಮೀ ಮಳೆಯಾಗಿತ್ತು ಎನ್ನಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ 38.97 ಮಿಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಸಂದರ್ಭದಲ್ಲಿ 25.15 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 438.83 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 879.48 ಮಿಮೀ ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಪ್ರಸ್ತುತ ಸರಾಸರಿ 18.40 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 16.18 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 216.74 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 581.41 ಮಿಮೀ ಮಳೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಟಿಪ್ಪರ್ ಲಾರಿಗಳ ಹಾವಳಿ; ರೇಷ್ಮೆ ಹುಳು ರಸ್ತೆಗೆ ಸುರಿದು ರೈತರ ಪ್ರತಿಭಟನೆ
ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ 6.63 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 12.47 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 213.38 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 483.83 ಮಿಮೀ ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 13.40, ನಾಪೋಕ್ಲು 56.20, ಸಂಪಾಜೆ 32.50, ಭಾಗಮಂಡಲ 53.80, ವಿರಾಜಪೇಟೆ ಕಸಬಾ 41, ಹುದಿಕೇರಿ 21.60, ಶ್ರೀಮಂಗಲ 11.40, ಪೊನ್ನಂಪೇಟೆ 20, ಅಮ್ಮತ್ತಿ 16, ಬಾಳೆಲೆ 0.40, ಸೋಮವಾರಪೇಟೆ ಕಸಬಾ 5, ಶನಿವಾರಸಂತೆ 1.40, ಶಾಂತಳ್ಳಿ 9, ಕೊಡ್ಲಿಪೇಟೆ 2.20, ಕುಶಾಲನಗರ 7, ಸುಂಟಿಕೊಪ್ಪ 15.20 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (28-06-2023) ವರದಿ