ದೇವಸ್ಥಾನ ಜಾಗವನ್ನು ಅತಿಕ್ರಮಣ ಮಾಡುವ ಉದ್ದೇಶದಿಂದ ವಿಚಾರವಾಗಿ ವಿಕೋಪಕ್ಕೆ ತಿರುಗಿ ಓರ್ವ ವ್ಯಕ್ತಿಗೆ ಗಂಭೀರ ಗಾಯಗೊಂಡ ಘಟನೆ ದೇವದುರ್ಗ ತಾಲ್ಲೂಕು ಮಲ್ಲದಕಲ್ ಗ್ರಾಮದಲ್ಲಿ ನಡೆದಿದೆ.
ತಿಮ್ಮಪ್ಪ ಕರ್ಣ (34) ಗಂಭೀರ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಇರುವ ದೇವಸ್ಥಾನ ಜಾಗವನ್ನು ಸ್ವಂತ ಜಾಗವೆಂದು ಬಲವಾಗಿ ಅತಿಕ್ರಮಣ ಮಾಡುವ ಪ್ರಯತ್ನ ನಡೆಸಿದ್ದರು.ಇದನ್ನು ದೂರು ನೀಡಿದಕ್ಕೆ ಸಹಿಸದೆ ನಿನ್ನೆ ರಾತ್ರಿ ಗುಂಪೊಂದು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ದೂರು ನೀಡಿದ ಪ್ರಕಾರ ಮೇಲಾಧಿಕಾರಿ ವಿಚಾರಿಸಿದ್ದರು.ಅದರ ವಿರುದ್ಧವಾಗಿ ಕಾನೂನು ಪ್ರಕಾರ ದಾಖಲೆಗಳನ್ನು ಸಲ್ಲಿಸಬೇಕಿತ್ತು.ಕಾನೂನುವಾಗಿ ಗೆಲ್ಲಬೇಕಿತ್ತು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹತ್ತಿ ಬೀಜ ಹಾಗೂ ರಸಗೊಬ್ಬರ ಮಾರಾಟದಲ್ಲಿ ರೈತರಿಗೆ ಮೋಸ ; ಕಠಿಣ ಕ್ರಮಕ್ಕೆ ಒತ್ತಾಯ
ಈ ವಿಚಾರವಾಗಿ ತಿಮ್ಮಪ್ಪ ಕರ್ಣ ಅವರಿಗೆ ಮಾತನಾಡಿಸಿದಾಗ ದೇವಸ್ಥಾನ ಜಾಗವನ್ನು ಅಕ್ರಮವಾಗಿ ಕಬಳಿಸುವ ಹುನ್ನಾರ ನಡೆದಿತ್ತು.ಇದನ್ನು ಕಾನೂನು ರೀತಿಯಲ್ಲಿ ತಡೆಯಲು ಮೇಲಾಧಿಕಾರಿ ಇಒ ಅವರಿಗೆ ದೂರು ಸಲ್ಲಿಸಲಾಗಿತ್ತು.ಇದನ್ನು ಸಹಿಸದೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.
ರಾಯಚೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಬ್ಬೂರು ಪೊಲೀಸ್ ಠಾಣೆಯ ಪಿ ಎಸ್ ಐ ಅವರಿಗೆ ಸಂಪರ್ಕಿಸಿದಾಗ ದೇವಸ್ಥಾನ ಜಾಗ ದ ವಿಚಾರವಾಗಿ ಗಲಾಟೆ ನಡೆದಿದೆ.ಯಾವುದೇ ಪ್ರಕರಣ ದಾಖಲಾಗಿಲ್ಲ.ತಪ್ಪಿತಸ್ಥರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.