- ಲಿಂಗತ್ವ ಅಲ್ಪಸಂಖ್ಯಾತರ ವಿಚಾರ ಬರೀ ವಿವಾಹಕ್ಕೆ ಸಂಬಂಧಿಸಿದ್ದಲ್ಲ
- ದೇಶದಲ್ಲಿ 10 ಕೋಟಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ
“ಲೈಂಗಿಕ ಅಲ್ಪಸಂಖ್ಯಾತರು ಯಾರ ಜತೆಗೆ ಸಂಬಂಧ ಬೆಳೆಸಬೇಕು. ಯಾರೊಂದಿಗೆ ವಿವಾಹವಾಗಬೇಕು. ಯಾವ ಬಟ್ಟೆ ಹಾಕಬೇಕು ಹಾಗೂ ಯಾವ ಊಟ ಮಾಡಬೇಕು ಎಂಬುದು ನಮ್ಮ ಇಷ್ಟ. ಅದನ್ನು ನಾವು ತಿರ್ಮಾನ ಮಾಡುತ್ತೇವೆ. ಇದು ಸರ್ಕಾರದ ತೀರ್ಮಾನವಲ್ಲ. ನಮಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಮಾತ್ರ ಸರ್ಕಾರದ ಜವಾಬ್ದಾರಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ದೇಶದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು” ಎಂದು ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹೇಳಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ನಾವು ಕೂಡ ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ, ರಾಜ್ಯಸಭೆ ಸೇರಿದಂತೆ ಎಲ್ಲ ಶಾಸನಸಭೆಗಳಲ್ಲಿ ಭಾಗಿಯಾಗಬೇಕು. ನಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಲು ನಮ್ಮನ್ನು ಸಂಸತ್ತಿಗೆ ಬಿಡಬೇಕು” ಎಂದರು.
“ರಾಜಕೀಯ ಪ್ರಾತಿನಿಧ್ಯಕ್ಕಾಗಿ ಜೂನ್ 28ರಂದು ರಾಷ್ಟ್ರೀಯ ಆಂದೋಲನವನ್ನು ಉದ್ಘಾಟನೆ ಮಾಡಿದ್ದೇವೆ. ಏಕೆಂದರೆ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ಪ್ರಾತಿನಿಧ್ಯ ತುಂಬಾ ಮುಖ್ಯವಾಗಿದೆ. ಅದು ಅಗತ್ಯವಾಗಿ ಬೇಕಾಗಿದೆ” ಎಂದರು.
“ಲಿಂಗತ್ವ ಅಲ್ಪಸಂಖ್ಯಾತರ ವಿಚಾರ ಬರೀ ವಿವಾಹಕ್ಕೆ ಸಂಬಂಧಿಸಿದ್ದಲ್ಲ. ನಮ್ಮ ಹಕ್ಕುಗಳ ಬಗ್ಗೆ ತೀರ್ಮಾನ ಮಾಡಲು ಕೇಂದ್ರ ಸರ್ಕಾರಕ್ಕೆ ಬಿಟ್ಟುಬಿಡಿ ಎಂದು ಹೇಳಲಾಗುತ್ತಿದೆ. ಈಗಾಗಲೇ ಇವರು ಮಾಡಿರುವ ಕೆಲಸಗಳನ್ನು ನೋಡಿದರೆ ಅವು ಯಾವೂ ಕೂಡ ನಮ್ಮ ಪರವಾಗಿ ಇಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೋಬೋಟ್ ನೆರವಿನಿಂದ 30 ವರ್ಷದ ರೋಗಿಗೆ ಮಗುವಿನ ಮೂತ್ರಪಿಂಡ ಕಸಿ
“ನಮ್ಮ ಸಮುದಾಯದ ಬಗ್ಗೆ ಮಾತನಾಡುವಾಗ ನಮ್ಮವರು ಕೂಡ ಸಂಸತ್ತಿನಲ್ಲಿ ಇರಬೇಕು. ದೇಶದ ಜನಸಂಖ್ಯೆಯಲ್ಲಿ ಶೇ.10ರಷ್ಟು ನಾವಿದ್ದೇವೆ. ಅಂದರೆ, 130 ಕೋಟಿ ಜನಸಂಖ್ಯೆಯಲ್ಲಿ 10 ಕೋಟಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಆ ಸಮುದಾಯಗಳ ಆಧಾರದ ಮೇಲೆ ನಮಗೆ ರಾಜಕೀಯ ಪ್ರಾತಿನಿಧ್ಯ ಬೇಕು. ಎಲ್ಲ ಪಕ್ಷದವರಿಗೂ ನಾವು ಈ ಬಗ್ಗೆ ಕೇಳುತ್ತಿದ್ದೇವೆ” ಎಂದು ಹೇಳಿದರು.
ನಮಗೆ ಮೊದಲು ಮೊಲಭೂತ ಸೌಲಭ್ಯಗಳ ಹಕ್ಕನ್ನು ಕೊಡಲು ಕಾನೂನು ಪಾಲಸಿ ಮಾಡಲಿ ನಂತರ ನಮಗೆ ಮದುವೆ ಹಕ್ಕು ಪ್ರತಿಪ್ಪಾದಿಸೋಣ ನಮಗೆ ಗುಣಮಟ್ಟ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸ್ವಯಂ ಉದ್ಯೋಗಕ್ಕೆ ಹಣಕಾಸಿನ ನೆರವು ಭೂಮಿ ಕೊಡಲಿ ನಂತರ ನಾವು ಉತ್ತಮ ವಾಗಿ ಬದುಕು ಕಟ್ಟಿಕೊಂಡಾಗ ಮದುವೆ ಹಕ್ಕು ಕೇಳೋಣ
ಮದುವೆ ಆಗಿ ಭೀದಿಯಲ್ಲಿ ಸಂಸಾರ ಮಾಡಬೇಕಾ???