ಬೆಂಗಳೂರು | ರೋಬೋಟ್‌ ನೆರವಿನಿಂದ 30 ವರ್ಷದ ರೋಗಿಗೆ ಮಗುವಿನ ಮೂತ್ರಪಿಂಡ ಕಸಿ

Date:

  • ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 30 ವರ್ಷದ ರೋಗಿಗೆ ಮಗುವಿನ ಕಿಡ್ನಿ ಕಸಿ
  • ರೋಬೋಟಿಕ್ ತಂತ್ರಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಮೂತ್ರಪಿಂಡ ಕಸಿ

ರಾಜಧಾನಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡ ರೋಬೋಟ್‌ ನೆರವಿನಿಂದ 13 ತಿಂಗಳ ಮಗುವಿನ ಮೂತ್ರಪಿಂಡವನ್ನು 30 ವರ್ಷದ ರೋಗಿಯೊಬ್ಬರಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದೆ.

- Advertisement -

30 ವರ್ಷದ ರೋಗಿಯೊಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇವರಿಗೆ ಆಸ್ಪತ್ರೆಯ ಹಿರಿಯ ನಿರ್ದೇಶಕ (ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ) ಡಾ. ಮೋಹನ್ ಕೇಶವಮೂರ್ತಿ ಅವರು ನಾಲ್ಕು ಗಂಟೆಗಳಲ್ಲಿ ರೋಬೋಟಿಕ್ ತಂತ್ರಗಳನ್ನು ಬಳಸಿಕೊಂಡು 13 ತಿಂಗಳ ಮಗುವಿನ ಮೂತ್ರಪಿಂಡವನ್ನು ಕಸಿ ಮಾಡಿದ್ದು, ಈ ಕಾರ್ಯವಿಧಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

30 ವರ್ಷದ ರೋಗಿಯೊಬ್ಬರು ರಕ್ತಹೀನತೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಾಗೆಯೇ ಡಯಾಲಿಸಿಸ್‌ನಿಂದ ತೊಂದರೆ ಅನುಭವಿಸುತ್ತಿದ್ದರು. ಇವರಿಗೆ ಮೂತ್ರಪಿಂಡ ಕಸಿ ಮಾಡುವ ಅವಶ್ಯಕತೆ ಇತ್ತು. ಹಾಗಾಗಿ, ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ ಮಗುವಿನ ಕಿಡ್ನಿ ದಾನ ಮಾಡಲು ಪೋಷಕರು ಒಪ್ಪಿದ ಹಿನ್ನೆಲೆ ಮಗುವಿನ ಮೂತ್ರಪಿಂಡವನ್ನು ರೋಗಿಗೆ ಕಸಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಡಾ ಮೋಹನ್ ಕೇಶವಮೂರ್ತಿ, “ನಾಲ್ಕು ಗಂಟೆಗಳಲ್ಲಿ ರೋಬೋಟಿಕ್ ತಂತ್ರಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಲಾಗಿದೆ. ಮೂತ್ರಪಿಂಡವನ್ನು ದಾನ ಮಾಡಿದ ವ್ಯಕ್ತಿಯ ವಯಸ್ಸು ಮುಖ್ಯವಲ್ಲ. ಇಲ್ಲಿ ಮೂತ್ರಪಿಂಡದ ಕೆಲಸ ರಕ್ತವನ್ನು ಶುದ್ಧೀಕರಿಸುವುದಾಗಿದೆ. ಮೂತ್ರಪಿಂಡವನ್ನು ವಯಸ್ಕರ ದೇಹದಲ್ಲಿ ಕಸಿ ಮಾಡಿದ ನಂತರ ಅದು ಅವರ ಕಾರ್ಯಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ವಿದ್ಯಾರ್ಥಿ ಮೇಲೆ ಹಲ್ಲೆ: 7 ಆರೋಪಿಗಳ ಬಂಧನ

“ಮೂತ್ರಪಿಂಡದ ಕಾರ್ಯ ಸುಮಾರು 300 ಪ್ರತಿಶತದಷ್ಟು ವಿಸ್ತರಿಸುತ್ತದೆ. ದಾನಿ ಮತ್ತು ಸ್ವೀಕರಿಸುವವರ ರಕ್ತನಾಳ ಮತ್ತು ಮೂತ್ರಪಿಂಡದ ಮೂತ್ರನಾಳಗಳನ್ನು ದಾನಿಯ ಮೂತ್ರಕೋಶಕ್ಕೆ ಸಂಪರ್ಕಿಸಲು ರೋಬೋಟ್‌ ಸಹಾಯ ಪಡೆಯಲಾಗಿದೆ. ಎರಡೂ ಮೂತ್ರಪಿಂಡಗಳನ್ನು ಒಟ್ಟಿಗೆ ಕಸಿ ಮಾಡುವ ಎನ್-ಬ್ಲಾಕ್ ಪ್ರಕ್ರಿಯೆಯು ಅಪರೂಪವಾಗಿದೆ. ಮೂತ್ರಪಿಂಡಗಳ ಬೆಂಚ್ ಶಸ್ತ್ರಚಿಕಿತ್ಸೆಗೆ ಅತ್ಯಂತ ನಿಖರತೆಯ ಅಗತ್ಯವಿರುತ್ತದೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

AI ಗೆ ಸಂಪೂರ್ಣ ನಿಯಂತ್ರಣ ಬೇಡ, ಕೆಲ ಅಪಾಯಗಳನ್ನು ಸ್ವೀಕರಿಸೋಣ: ಸ್ಯಾಮ್ ಆಲ್ಟ್‌ಮನ್

AI ತಂತ್ರಜ್ಞಾನದಿಂದ ಉಂಟಾಗಬಹುದಾದ ಕೆಲವು ಅಪಾಯಗಳನ್ನು ಒಪ್ಪಿಕೊಂಡರೂ, ಅದರ ಮೂಲಕ ದೊರೆಯುವ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...