ಬೀದರ್ | ಔರಾದ ಪಟ್ಟಣ ಪಂಚಾಯತಿಗೆ ಒಲಿಯುವುದೇ ಪುರಸಭೆ ಭಾಗ್ಯ?

Date:

Advertisements

ಬೀದರ್ ಜಿಲ್ಲೆಯಲ್ಲಿ ಬೀದರ್ ಮತ್ತು ಬಸವಕಲ್ಯಾಣ ನಗರಸಭೆ ಹಗೂ ಹುಮನಾಬಾದ್, ಭಾಲ್ಕಿ, ಚಿಟಗುಪ್ಪ ಮತ್ತು ಹಳ್ಳಿಖೇಡ್(ಬಿ) ಪುರಸಭೆಗಳಿವೆ. ಆದರೆ, ತಾಲೂಕು ಕೇಂದ್ರ ಆಗಿರುವ ಔರಾದ ಇನ್ನೂ ಪಟ್ಟಣ ಪಂಚಾಯತಿ ಆಗಿಯೇ ಉಳಿದಿರುವುದು ವಿಪರ್ಯಾಸ.

ಔರಾದ ಕರ್ನಾಟಕದ ತುತ್ತ ತುದಿಯಲ್ಲಿರುವ ತಾಲೂಕು. ಔರಾದ ಪಟ್ಟಣದಿಂದ ಹತ್ತು ಕಿ.ಮೀ ದಾಟಿದರೆ ಅತ್ತ ಮಹಾರಾಷ್ಟ್ರ, ಇತ್ತ ತೆಲಂಗಾಣ ರಾಜ್ಯಗಳಿವೆ. ಹೀಗೆ ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡ ತಾಲೂಕು ಬೀದರ್‌ ಜಿಲ್ಲೆಯಲ್ಲಿಯೇ ಹಿಂದುಳಿತ ತಾಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಈ ಹಿಂದೆ ಮಂಡಲ್ ಪಂಚಾಯತಿಗೆ ಒಳಪಟ್ಟಿದ್ದ ಔರಾದ ಸ್ಥಳೀಯ ಆಡಳಿತ, ನಂತರ ದಿನಗಳಲ್ಲಿ ಪಟ್ಟಣ ಪಂಚಾಯತಿ ಆಗಿ ಮೇಲ್ದರ್ಜೆಗೇರಿತು.‌ ಜನಸಂಖ್ಯೆಗೆ ಅನುಗುಣವಾಗಿ ಕಾಲಕ್ರಮೇಣ ಮೇಲ್ದರ್ಜೆಗೆ ಏರಬೇಕಾದ ಸ್ಥಳೀಯ ಆಡಳಿತ ಇನ್ನೂ ಹಾಗೇ ಉಳಿದಿರುವುದು ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯನ್ನು ತೋರಿಸುತ್ತದೆ.

Advertisements

ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಮೂಲಕ ಸ್ಥಳೀಯ ಸಂಸ್ಥೆಗಳು ಹುಟ್ಟಿಕೊಂಡವು. ಜನಸಂಖ್ಯೆಗೆ ಅನುಗುಣವಾಗಿ ಕಾಲಕ್ರಮೇಣ ಆಡಳಿತಗಳು ಬದಲಾಗಬೇಕೆಂಬ ನಿಯಮಗಳು ಇದ್ದರೂ, ಬದಲಾವಣೆ ಆಗದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಅರ್ಹತೆ ಇದ್ದರೂ ಪುರಸಭೆಯಾಗಿ ಮೇಲ್ದರ್ಜೆಗೇರದೆ ಉಳಿದ ಜಿಲ್ಲೆಯ ಏಕೈಕ ಪಟ್ಟಣ ಪಂಚಾಯತಿ ಔರಾದ ಎಂಬಂತಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಬರೋಬ್ಬರಿ 840 ಕಿ.ಮೀ. ಹಾಗೂ ಬೀದರ್ ಜಿಲ್ಲಾ ಕೇಂದ್ರದಿಂದ 42 ಕಿ.ಮೀ. ದೂರವಿರುವ ಔರಾದ ಇತರೆ ತಾಲೂಕುಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದಿದೆ. ಔರಾದ ಪಟ್ಟಣ ಪಂಚಾಯತಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಆಗಾಗ್ಗೆ ಪಟ್ಟಣದ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯೇ ಇದಕ್ಕೆ ಉದಾಹರಣೆ.

2011 ಜನಗಣತಿ ಪ್ರಕಾರ ಔರಾದ ಪಟ್ಟಣದ ಜನಸಂಖ್ಯೆ 19,849 ಇತ್ತು.‌ ಇದೀಗ 25,000ಕ್ಕೂ ಅಧಿಕ ದಾಟಿದೆ. ಈ ಹಿಂದೆ ಇದ್ದ 14 ವಾರ್ಡ್ ಸದಸ್ಯರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಂದರೆ, ಪುರಸಭೆಗೆ ಬೇಕಾಗುವ ಎಲ್ಲ ಅರ್ಹತೆಯನ್ನು ಔರಾದ ಪಟ್ಟಣ ಪಂಚಾಯತಿ ಹೊಂದಿದೆ.‌ ಈ ಬಗ್ಗೆ ಎಲ್ಲ ಪ್ರಸ್ತಾವನೆ ಹಿಂದಿನ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿದೆ. ಆರ್ಥಿಕ ಮಾನ್ಯತೆ ಪಡೆಯದ ಕಾರಣ ಹಾಗೇ ಉಳಿದಿದೆ. ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರ ಮೇಲೆ ಒತ್ತಡ ಹೇರಿದರೆ ಪಟ್ಟಣದ ಜನರ ಕನಸು ಈಡೇರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

“ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕನಸಾಗಿಯೇ ಉಳಿದಿದೆ. ಇದೀಗ ಹೊಸ ಸರ್ಕಾರದ ಅವಧಿಯಲ್ಲಿ ಖಂಡಿತ ಆಗುತ್ತೆ, ಇನ್ನೊಮ್ಮೆ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು” ಎಂದು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕುಮಾರ್ ದೇಶಮುಖ ಈದಿನ.ಕಾಮ್‌ಗೆ ತಿಳಿಸಿದ್ದಾರೆ.

ಇಚ್ಚಾಶಕ್ತಿ ತೋರುವರೇ ಇಬ್ಬರು ಸಚಿವರು

ಇಂದಿನ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಅಂದು ಔರಾದ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ಔರಾದ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವೆ’ ಎಂದು ಭರವಸೆ ನೀಡಿದರು. ಆದರೆ, ನಂತರದ ದಿನಗಳಲ್ಲಿ ಇಚ್ಚಾಶಕ್ತಿ ತೋರಲಿಲ್ಲ.

ಕಳೆದ ಬಾರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಪಶು ಸಂಗೋಪನಾ ಸಚಿವರಾಗಿದ್ದ ಸ್ಥಳೀಯ ಶಾಸಕ ಪ್ರಭು ಚವ್ಹಾಣ ಅವರು ಜನರ ಬೇಡಿಕೆಗೆ ಸ್ಪಂದಿಸಿ ಕನಸು ಈಡೇರಿಸಬಹುದಿತ್ತು. ಆದರೆ, ಅವರೂ ಇಚ್ಚಾಶಕ್ತಿ ತೋರಲಿಲ್ಲ ಎನ್ನುತ್ತಾರೆ ಸ್ಥಳೀಯರು. ಇದೀಗ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದದೆ. ಮತ್ತೊಮ್ಮೆ ಪೌರಾಡಳಿತ ಖಾತೆ ಬೀದರ್ ಜಿಲ್ಲೆಯವರಿಗೆ ಒಲಿದಿದೆ. ಈಗ ಬೀದರ್ ಶಾಸಕ ರಹೀಂ ಖಾನ್ ಪೌರಾಡಳಿತ ಸಚಿವರಾಗಿದ್ದಾರೆ. ಅಂದಿನ ಪೌರಾಡಳಿತ ಸಚಿವ ಈಶ್ವರ ಖಂಡ್ರೆಯವರು ಔರಾದ ಜನತೆಗೆ ನೀಡಿದ ಭರವಸೆಯನ್ನು ಇಂದಿನ ಪೌರಾಡಳಿತ ಸಚಿವ ರಹೀಂ ಖಾನ್ ಈಡೇರಿಸುವರೇ ಎಂಬುದು ಪಟ್ಟಣದ ಜನರ ನಿರೀಕ್ಷೆಯಾಗಿದೆ.

ಈ ಸುದ್ದಿ ಓದಿದ್ದೀರಾ?: ಧಾರವಾಡ | ಜಿಲ್ಲಾಸ್ಪತ್ರೆಯಲ್ಲಿ ಸರ್ವರ್ ಸಮಸ್ಯೆ; ಹೊರರೋಗಿಗಳ ಆಕ್ರೋಶ

ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ತಾಲೂಕು ಕೇಂದ್ರವೂ ಅಲ್ಲ, ಜನಸಂಖ್ಯೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಬಲಾಬಲ ರಾಜಕೀಯ ನಾಯಕರ ಇಚ್ಚಾಶಕ್ತಿಯ ಕಾರಣದಿಂದ ನೇರವಾಗಿ ಪುರಸಭೆಯಾಗಿದೆ. ಆದರೆ, ಔರಾದ ತಾಲೂಕು ಕೇಂದ್ರವಾಗಿದ್ದರೂ ಸಹ ಪಟ್ಟಣ ಪಂಚಾಯತಿ ಆಗಿಯೇ ಉಳಿದಿರುವುದು ಜನರ ಬೇಡಿಕೆಗಳಿಗೆ ಬೆಲೆ ಇಲ್ಲದಂತಾಗಿದೆ. ಈಗಲಾದರೂ ಜಿಲ್ಲೆಯ ಉಸ್ತುವಾರಿ ಸಚಿವರು, ಪೌರಾಡಳಿತ ಸಚಿವರು ಇಚ್ಚಾಶಕ್ತಿ ತೋರಿ ಬಹುದಿನಗಳ ಕನಸು ಈಡೇರಿಸಬೇಕೆಂದು ಪಟ್ಟಣದ ಜನರ ಒತ್ತಾಯಿಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X