ಮಕ್ಕಳ ಶಿಕ್ಷಣ ಕಲಿಕೆ ನಿರಂತರವಾಗಿರಬೇಕು. ಕಾಲೇಜಿನಲ್ಲಿ ಬರೀ ಪ್ರಮಾಣ ಪತ್ರ ಕೊಟ್ಟು ಕಳಿಸುವುದಕ್ಕಿಂತ ಅವರ ಕೈಗೆ ಉದ್ಯೋಗ ಕೊಟ್ಟು ಕಳಿಸಬೇಕು. ಅದಕ್ಕಾಗಿ ನಮ್ಮಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ ಎಂದು ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಮಲ್ಲಿಕಾರ್ಜುನ್ ಬಿ ಆರ್ ಹೇಳಿದರು.
ಬೀದರ್ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಡಿಪ್ಲೊಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ವರ್ಷದ ಡಿಪ್ಲೊಮಾ, ಮೆಕ್ಯಾನಿಕಲ್ ಹಾಗೂ ಆಟೋಮೊಬೈಲ್ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಪ್ಲೇಸ್‌ಮೆಂಟ್ ದೊರಕಿದೆ. ಬಡ ವಿದ್ಯಾರ್ಥಿಗಳಿಗೆ ಕಲಿಯುವಿಕೆ ಜೊತೆಗೆ ತರಬೇತಿ ಹಾಗೂ ಉದ್ಯೋಗ ಕೊಡಿಸುವ ಕಾರ್ಯ ನಮ್ಮ ಪ್ಲೇಸ್‌ಮೆಂಟ್ ಘಟಕದ ಮುಖ್ಯ ಉದ್ದೇಶವಾಗಿದೆ” ಎಂದು ಪ್ಲೇಸ್‌ಮೆಂಟ್ ಅಧಿಕಾರಿ ಮಹೇಶ್ ಸ್ವಾಮಿ ತಿಳಿಸಿದರು.
“ಸರ್ಕಾರಿ ಪಾಲಿಟೆಕ್ನಿಕ್ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ವಿಜಯಕುಮಾರ್ ವಲ್ಲೂರು
ಮಾತನಾಡಿ, “ವಿದ್ಯಾರ್ಥಿಗಳು ಸಂದರ್ಶನದ ಸಂದರ್ಶನದ ಸದುಪಯೋಗ ಮಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ ಪಟ್ಟಣ ಪಂಚಾಯತಿಗೆ ಒಲಿಯುವುದೇ ಪುರಸಭೆ ಭಾಗ್ಯ?
ಜಿಲ್ಲೆಯ ಎಲ್ಲ ಕಾಲೇಜಿನ 120 ಮಂದಿ ಡಿಪ್ಲೊಮಾ ಹಾಗೂ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ,ವೈಯಕ್ತಿಕ ಪರೀಕ್ಷೆ ನಡೆಸಿ ಡಿಪ್ಲೊಮಾ ಮೆಕ್ಯಾನಿಕಲ್, ಆಟೊಮೊಬೈಲ್, ಎಲೆಕ್ಟ್ರಿಕಲ್ ಸೇರಿದಂತೆ ಒಟ್ಟು 65 ಮಂದಿ ವಿದ್ಯಾರ್ಥಿಗಳು ಹಾಗೂ 10 ಮಂದಿ ಐಟಿಐ ವಿದ್ಯಾರ್ಥಿಗಳಿ ಉದ್ಯೋಗ ದೃಢೀಕರಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರೊಫೆಸರ್ ಅರುಣ್ ಮುಖಾಸಿ, ಪ್ಲೇಸ್‌ಮೆಂಟ್ ಅಧಿಕಾರಿ ಮಹೇಶ್ ಶಕೆದಾರ್, ರೆಜಿಸ್ಟರ್ ಶಿವರಾಜುದ್ದೀನ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಇದ್ದರು.