5ನೇ ಗದಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಇಂದು ಗದಗ ಜಿಲ್ಲೆಯ ಗದಗ ತಾಲ್ಲೂಕು ಕುರ್ತಕೋಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸರೋಜಾ ಬೂದಪ್ಪ ಅಂಗಡಿ ಅವರು ಚಾಲನೆ ನೀಡಿದರು.
ಕುರ್ತಕೋಟಿ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಭುವನೇಶ್ವರಿ ಹಾಗೂ ಸಮ್ಮೇಳನಧ್ಯಕ್ಷರು ಜೆ ಕೆ ಜಮಾದಾರ ಅವರ ಮೆರವಣಿಗೆಯು ಗ್ರಾಮ ಪಂಚಾಯಿತಿಯಿಂದ ಆರಂಭಗೊಂಡು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಮಂಕಮ್ಮ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ ಶರಣಬಸವಶ್ವರ ದೇವಸ್ಥಾನ ಶ್ರೀ ಸಂಗೊಳ್ಳಿ ರಾಯಣ್ಣ ಮೂರ್ತಿ ಮಾರ್ಗದ ಮೂಲಕ ಸಮ್ಮೇಳನದ ಸಭಾ ಭವನದವರೆಗೂ ಮೆರವಣಿಗೆ ನಡೆಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ : ಅರಣ್ಯ ಪಾಲಕ ದಸ್ತಗಿರಿಸಾಬ ಅಮಾನತು
ಮೆರವಣಿಗೆಯೂದ್ಧಕ್ಕೂ ಕುಂಭ ಹೊತ್ತ ಮಹಿಳೆಯರು, ಶೃಂಗಾರಗೊಂಡ ಎತ್ತಿನ ಬಂಡಿಗಳು, ಜಗ್ಗಲಗಿ, ಕರಡಿ ಮಜಲು ನಂದಿಕೋಲು ಮೇಳಗಳು ಇದ್ದವು.
