ಹಿಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆದ ಜೋಳವನ್ನು ಬೆಂಬಲ ಬೆಲೆಯಡಿಯಲ್ಲಿ ಖರೀದಿಸಲು ನಿಗದಿಪಡಿಸಿದ ಅವಧಿಯ ಮಿತಿಯನ್ನು ವಿಸ್ತರಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಘಟಕದ ರೈತರು ಆಗ್ರಹಿಸಿದರು.
ಬಳ್ಳಾರಿ ಜಿಲ್ಲಾಡಳಿತದ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
“ರಾಜ್ಯ ಸರ್ಕಾರವು ರೈತರ ಕಣ್ಣೊರೆಸಲು ಹಿಂಗಾರು ಅವಧಿಯಲ್ಲಿನ ಜೋಳ ಖರೀದಿಗೆ ನೊಂದಣೆ ಕೇಂದ್ರಗಳನ್ನು ತೆರೆದಿದೆ. ಬಳ್ಳಾರಿ ಜಿಲ್ಲೆಗೆ ಕೇವಲ 40 ಸಾವಿರ ಕ್ವಿಂಟಲ್ ನಿಗದಿಪಡಿಸಿದ್ದರಿಂದ ಜಿಲ್ಲೆಯಲ್ಲಿ 54,740 ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದ್ದು, ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ನಿಗದಿಪಡಿಸಲಾಗಿದೆ. ಈ ಎರಡು ಮಾನದಂಡಗಳೂ ರೈತರನ್ನು ಆತಂಕಕ್ಕೀಡು ಮಾಡಿದೆ” ಎಂದು ರೈತರು ಕಳವಳ ವ್ಯಕ್ತಪಡಿಸಿದರು.
ಹಿಂಗಾರಿನಲ್ಲಿ ಕಟಾವು ಮಾಡಿದ ಜೋಳವನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಘೋಷಿಸುವ ಬೆಂಬಲ ಬೆಲೆಗಾಗಿ ರೈತರು ಕಾದು ಹೈರಾಣಾಗಿದ್ದಾರೆ. 4 ತಿಂಗಳ ಹಿಂದೆ ಮಾರಾಟಕ್ಕೆ ಸಿದ್ಧಪಡಿಸಿದ ಜೋಳಕ್ಕೆ ಹುಳಗಳು ಬೀಳುತ್ತಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಸರಿಯಾದ ಸಮಯಕ್ಕೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿ ಖರೀದಿ ಕೇಂದ್ರಗಳನ್ನು ತೆರೆಯದೆ ಇರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ” ಎಂದರು.
ಇದನ್ನೂ ಓದಿ: ಬಳ್ಳಾರಿ | ನೋಟಿಸ್ ನೀಡದೆ ಮನೆ ತೆರವು; ಪ್ರತಿಭಟನೆ
ಜೋಳ ಹುಳು ಬಿದ್ದು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ ಅಂತಹ ಆತಂಕದಲ್ಲಿರುವ ರೈತರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಹೆಚ್ಚುವರಿಯಾಗಿ ಖರೀದಿ ಮಾಡುವ ಪ್ರಮಾಣವನ್ನು ಹಾಗೂ ಖರೀದಿ ಸಮಯವನ್ನು ಹೆಚ್ಚು ಮಾಡಬೇಕು” ಎಂದು ಆಗ್ರಹಿಸಿದರು.