ಗದಗ್ನಲ್ಲಿರುವ ಸಾತ್ನಕೋತ್ತರ ಪದವಿ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಇಲಾಖೆ ಎಚ್.ಕೆ ಪಾಟೀಲ್ ಭೇಟಿ ನೀಡಿದ್ದು, ಕಾಲೇಜಿನ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಕಾಲೇಜಿಗೆ ಭೇಟಿ ನೀಡಿದ್ದ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. “ಈಗಾಗಲೇ ನೆಲ ಮಹಡಿಯ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಮೂರು ಮಹಡಿಗಳು ನಿರ್ಮಾಣ ಆಗಬೇಕಿದೆ” ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಕಟ್ಡಡ ಕಾಮಗಾರಿಯ ಸಂಪೂರ್ಣ ನಕ್ಷೆಯನ್ನು ಪರಿಶೀಲಿಸಿ, ಸರಿಯಾದ ಯೋಜನೆಯನ್ನು ಒಂದು ವಾರದೊಳಗೆ ಸಿದ್ಧಪಡಿಸಿ, ಸಲ್ಲಿಸಬೇಕು” ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಕಾಲೇಜಿಗೆ ಅಗತ್ಯವಿರುವ ಹೊಸಕೋರ್ಸುಗಳನ್ನು ತರುವ ಬಗ್ಗೆ ಹಾಗೂ ಅಗತ್ಯವಿರುವ ಸಾಮಗ್ರಿಗಳ ಕುರಿತಂತೆ ವಿವರಣೆ ಪಡೆದು ಸಚಿವರು, “ಶೀಘ್ರವೇ ಕೇಂದ್ರಕ್ಕೆ ಹೊಸ ಕೋರ್ಸ್ಗಳನ್ನು ತರುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲಾಗುವುದು” ಎಂದು ಹೇಳಿದ್ದಾರೆ.
ಈ ವೇಳೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪಿ ಎಸ್ ಪಾಟೀಲ್, ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗಣ್ಣವರ, ಸ್ನಾತಕೋತ್ತರ ಪದವಿ ಕೇಂದ್ರದ ಬೋಧಕ ಬೋಧಕೇತರ ಅಧಿಕಾರಿ ಸಿಬ್ಬಂದಿಗಳು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ ಸೇರಿದಂತೆ ಇತರರು ಇದ್ದರು.