ಜಿಲ್ಲಾ ಕಾರಾಗೃಹದಲ್ಲಿರುವ ಬಂಧಿ ನಿವಾಸಿಗಳಿಗೆ ವಿಶೇಷ ಪ್ರಬಂಧ ಸ್ಪರ್ಧೆ ನಡೆಸಿ ವಿಶ್ವ ಪುಸ್ತಕ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಕಾರಾಗೃಹದ ಅಧೀಕ್ಷಕಿ ಅನಿತಾ ಹಿರೇಮನಿ ತಿಳಿಸಿದರು.
ಪುಸ್ತಕ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳು ಮತ್ತು ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ,ರಾಯಚೂರು ಅವರ ಸಂಯುಕ್ತ ಆಶ್ರಯದಲ್ಲಿ, ವಿಚಾರಣಾಧೀನ ಬಂಧಿ ನಿವಾಸಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರಾಗೃಹದ ಬಂಧಿಗಳು ಸಹ ಓದು ಹಾಗೂ ಬರವಣಿಗೆಯ ಹವ್ಯಾಸ ಬೆಳೆಸಿ,ಅವರನ್ನು ಸಕಾರಾತ್ಮಕ ಜೀವನದತ್ತ ಪ್ರೇರೇಪಿಸುವ ಈ ರೀತಿಯ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ ಹಾಗೂ ಅವರ ಜೀವನದಲ್ಲಿ ಒಳ್ಳೆಯ ವಿಚಾರಣೆಗಳು ಆಲಿಸ ತೊಡಗುತ್ತವೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಕ್ಫ್ ಜಾರಿಗೆ ತಂದು ವಕ್ಫ್ ಆಸ್ತಿಯನ್ನು ಲೂಟಿ ಹೊಡೆಯುವ ಹುನ್ನಾರ ; ರಜಾಕ್ ಉಸ್ತಾದ
ಕಾರಾಗೃಹದಲ್ಲಿ ಇಂತಹ ಸ್ಪರ್ಧೆಗಳಿಂದ ಉದ್ದೇಶ ಬಂಧಿಗಳಿಗೆ ಸೃಜನಾತ್ಮಕ ಅಭಿವ್ಯಕ್ತಿ ಹಾಗೂ ಓದು-ಬರಹದ ಮೂಲಕ ವೈಚಾರಿಕ ಬೆಳವಣಿಗೆಗೆ ಉತ್ತೇಜನ ನೀಡುವುದು ಸಹಕಾರಿಯಾಗುತ್ತದೆ.
ಈ ಸ್ಪರ್ಧೆಯಲ್ಲಿ ಎಂಟು ಮಂದಿ ವಿಚಾರಣಾಧೀನ ಬಂಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹ ಜೈಲರ್‌ಗಳಾದ ವೆಂಕಟೇಶ್ ಹಾಗೂ ಪುಂಡಲೀಕ ಟಿ.ಕೆ, ಹಾಗು ಸ್ಪರ್ಧೆಯ ಮೇಲ್ವಿಚಾರಕರಾಗಿ ಸಹ ಶಿಕ್ಷಕರಾದ ತಾಯಪ್ಪ ಮರ್ಚಟ್ಹಾಳ ಕಾರ್ಯ ನಿರ್ವಹಿಸಿದರು.