ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ನಮ್ಮ ಬದುಕು ಕಷ್ಟಕರವಾಗಿತ್ತು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಗುಣಮಟ್ಟ ಶಿಕ್ಷಣ ಪಡೆದು ಉತ್ತಮ ಬದುಕು ರೂಪಿಸಿಕೊಂಡರೆ ಮಾತ್ರ ಅಂಬೇಡ್ಕರ್ ಆಶಯ ಈಡೇರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸೇಡಂ ಪಟ್ಟಣದಲ್ಲಿ ಶನಿವಾರ ಸಂಜೆ ಛಲವಾದಿ ಸಮಾಜ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಆಚರಣೆ ಪ್ರಯುಕ್ತ ಭೀಮಾ ಘರ್ಜನೆ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼದೇಶಾದ್ಯಂತ ಡಾ.ಅಂಬೇಡ್ಕರ್ ಅವರ ಜಯಂತಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸ್ವಾಭಿಮಾನ ಬದುಕು ನೀಡಿದ ಮಹಾನ್ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ ಅನನ್ಯವಾಗಿದೆ. ನಮ್ಮ ಮಕ್ಕಳನ್ನು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರವಹಿಸಿ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಬೇಕುʼ ಎಂದು ಕರೆ ನೀಡಿದರು.
ʼಸಮಾನತೆ ಸಮಾಜ ನಿರ್ಮಾಣಕ್ಕಾಗಿ ಎಲ್ಲರಿಗೂ ಸಂವಿಧಾನ ಮೂಲಕ ಸಮಾನ ಅವಕಾಶಗಳನ್ನು ನೀಡಿದ್ದಾರೆ. ಶೋಷಿತ ಸಮುದಾಯಕ್ಕೆ ಸ್ವಾಭಿಮಾನದಿಂದ ಬದುಕಲು ಬುನಾದಿ ಹಾಕಿಕೊಟ್ಟಿದ್ದಾರೆ. ಕಾರ್ಮಿಕರು ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಬೇಕೆಂಬ ಕಾನೂನು ಬಾಬಾ ಸಾಹೇಬರು ನೀಡಿದ್ದಾರೆʼ ಎಂದು ತಿಳಿಸಿದರು.
ಉರಿಲಿಂಗ ಪೆದ್ದೀಶ್ವರ ಮಹಾ ಸಂಸ್ಥಾನದ ಜ್ಞಾನ ಪ್ರಕಾಶ ಸ್ವಾಮಿ, ಆಣದೂರ ಭಂತೆ ವರಜ್ಯೋತಿ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು
ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ಜಯಂತೋತ್ಸವ ಸಮಿತಿ ಅಧ್ಯಕ್ಷ ಶ್ರೀಶೈಲ್ ಶಿವಕುಮಾರ್ ತೋಟ್ನಳ್ಳಿ, ಜೈ ಭೀಮ್ ಉಡಗಿ, ಬಸವರಾಜ ಪಾಟೀಲ್ ಉಡಗಿ, ಮಹಾಂತಪ್ಪ ಸಂಗಾವಿ, ಸತೀಶ್ ಪುಜಾರಿ, ಹಾಬಳ ಟಿ. ರೇವಣಸಿದ್ದಪ್ಪ ಚೊಂಚ್, ಬಸವರಾಜ ಸಾಗರ, ಗೋಪಾಲ ಸೇಡಂಕರ್, ಮಾರುತಿ ಹುಳಗೋಳಕರ, ಸುನೀಲ್ ಕೋಳಿ, ಜಗನ್ನಾಥ ಚಿಂತ್ಪಳಿ, ರಾಜು ಕಾಳಗಿ, ವೇಂಕಟಯ್ಯ ಮುಸ್ತಾಜರ್, ಶಂಭುಲಿಂಗ ನಾಟ್ಟೇಕರ್, ರಾಮಯ್ಯ ಪುಜಾರಿ, ಹಾಜಿ ನಾಡೆಪಲ್ಲಿ, ರಾಜು ಚೌವ್ಹಾಣ್, ಪ್ರಶಾಂತ ಸೇಡಂಕರ್, ಸಿದ್ದು ಉಡಗಿ, ಅರುಣಕುಮಾರ ಮೂಡಬೂಳಕರ್, ಮಹಾವೀರ ಅಳೋಳಿ, ಶ್ರೀಕಾಂತ್ ಜಾಪನೂರ, ರಾಮಕೃಷ್ಣ ರೆಡಿ, ಮಾರುತಿ ಕೊಡಂಗಲಕರ್, ಶಿವಶರಣಪ್ಪ ಗದ್ದಗಿ ಉಪಸ್ಥಿತರಿದ್ದರು. ವಿಲಾಸ್ ಗೌತಮ್ ಸ್ವಾಗತಿಸಿದರು. ಲಕ್ಷ್ಮಿಣ ರಂಜೋಳಕರ ಸೇರಿದಂತೆ ಅನೇಕರಿದ್ದರು.