ಜೆನ್ಸೋಲ್ ನಿಧಿ ಹಗರಣ ಈಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಸುಮಾರು 262 ಕೋಟಿ ರೂ. ವಂಚನೆ ಸಂಬಂಧಿಸಿದ ಈ ಪ್ರಕರಣದಿಂದಾಗಿ ಇವಿ ಕ್ಯಾಬ್ ಸೇವೆ ನೀಡುತ್ತಿದ್ದ ಕಂಪನಿ ಬ್ಲೂಸ್ಮಾರ್ಟ್ ಕ್ಯಾಬ್ ಕಂಪನಿ ಬಂದ್ ಆಗಿದೆ. ಈ ಸಂಸ್ಥೆಯಲ್ಲಿ ಕ್ರಿಕೆಟ್ ಆಟಗಾರ ಎಂ ಎಸ್ ಧೋನಿ, ನಟಿ ದೀಪಿಕಾ ಪಡುಕೋಣೆ ಕೂಡಾ ಹೂಡಿಕೆ ಮಾಡಿದ್ದರು ಎಂದು ವರದಿಯಾಗಿದೆ.
ಸೆಬಿ ತನ್ನ ಪ್ರಾಥಮಿಕ ತನಿಖೆಯಲ್ಲಿ ಜೆನ್ಸೋಲ್ ಎಂಜಿನಿಯರಿಂಗ್‌ನಲ್ಲಿ ವಂಚನೆ ನಡೆದಿರುವುದನ್ನು ಪತ್ತೆ ಹಚ್ಚಿದೆ. ಸಾರ್ವಜನಿಕ ಕಂಪನಿಯ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಂಪನಿಯ ನಿರ್ವಾಹಕರಾದ ಅನ್ಮೋಲ್ ಸಿಂಗ್ ಜಗ್ಗಿ ಮತ್ತು ಪುನೀತ್ ಸಿಂಗ್ ಜಗ್ಗಿ ಅವರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಸೆಬಿ ನಿಷೇಧಿಸಿದೆ.
ಇದನ್ನು ಓದಿದ್ದೀರಾ? ‘ಭಾರತದಲ್ಲಿ ಬಹುದೊಡ್ಡ ಬದಲಾವಣೆ ನಡೆಯಲಿದೆ’; ಅದಾನಿ ಬಣ್ಣ ಬಯಲು ಮಾಡಿದ್ದ ಹಿಂಡೆನ್‌ಬರ್ಗ್ ಹೀಗೆ ಹೇಳಿದ್ಯಾಕೆ?
ಕೆಲವು ಜನಪ್ರಿಯ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಇವಿ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ವರದಿ ಪ್ರಕಾರ ಎಂಎಸ್ ಧೋನಿ, ದೀಪಿಕಾ ಪಡುಕೋಣೆ, ಅಶ್ನೀರ್ ಗ್ರೋವರ್ ಮತ್ತು ಸಂಜೀವ್ ಬಜಾಜ್ ಇವಿ ಸ್ಟಾರ್ಟ್‌ಅಪ್ ಬ್ಲೂಸ್ಮಾರ್ಟ್‌ನ ಹೂಡಿಕೆದಾರರಲ್ಲಿ ಸೇರಿದ್ದಾರೆ.
ಪಡುಕೋಣೆ ಮೊದಲ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ನಡೆದ ಏಂಜಲ್ ಫಂಡಿಂಗ್ ಸುತ್ತಿನಲ್ಲಿ ನಟಿಯು ಸುಮಾರು 3 ಮಿಲಿಯನ್ ಡಾಲರ್ ಕೊಡುಗೆ ನೀಡಿದೆ. ಬಜಾಜ್ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್, ರಜತ್ ಗುಪ್ತಾ ಅವರೂ ಮೂರು ಮಿಲಿಯನ್ ಡಾಲರ್ ಹೂಡಿಕೆಯನ್ನು ಮಾಡಿದ್ದಾರೆ.
