ಬೀದರ್‌ | ಜನಿವಾರ ವಿವಾದ : ಮಾಜಿ ಎಂಎಲ್ಸಿ ಅರವಿಂದಕುಮಾರ್‌ ಅರಳಿ ಹೇಳಿಕೆಗೆ ಬಿಜೆಪಿ ಖಂಡನೆ

Date:

Advertisements

ಜನಿವಾರ ತೆಗೆಯದಿದ್ದಕ್ಕೆ ಬ್ರಾಹ್ಮಣ ವಿದ್ಯಾರ್ಥಿ ಸುಚಿವೃತ ಕುಲಕರ್ಣಿಗೆ ಸಿಇಟಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದಕ್ಕೆ ಬಿಜೆಪಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಷಡ್ಯಂತ್ರ ಕಾರಣ ಎಂದು ವಿಧಾನ ಪರಿಷತ್
ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಹೇಳಿಕೆ ಅವರ ಹೀನ ಮನಸ್ಥಿತಿಗೆ ಸಾಕ್ಷಿಯಾಗಿದೆ. ಈ ರೀತಿಯ ಅರ್ಥಹೀನ, ಅಸಂಬದ್ಧ, ತಲೆಬುಡವಿಲ್ಲದ ಹಾಗೂ ಅಸತ್ಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್
ದೂರಿದ್ದಾರೆ.

ʼಯಾವ ವಿಷಯದ ಬಗ್ಗೆ ಏನು ಹೇಳಬೇಕು? ಎಂಥ ವಿಷಯದಲ್ಲಿ ರಾಜಕೀಯ ಮಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದ ಹೇಳಿಕೆ ಇದಾಗಿದೆ. ಜನಿವಾರ ತೆಗೆಯದಿದ್ದಕ್ಕೆ ವಿದ್ಯಾರ್ಥಿಗೆ ಸಿಇಟಿ ಪ್ರವೇಶ ನೀಡಲು ನಿರಾಕರಿಸಿದ್ದಕ್ಕೂ ಬಿಜೆಪಿಗೂ ಏನು ಸಂಬಂಧ? ಇದೊಂದು ಧರ್ಮ ವಿರೋಧಿ ಕಾರ್ಯ. ಒಬ್ಬ ವಿದ್ಯಾರ್ಥಿಯ ಶಿಕ್ಷಣ ಹಕ್ಕು ಕಸಿದಿರುವ ಸಂವಿಧಾನದ ಆಶಯಕ್ಕೆ ಚ್ಯುತಿ ತಂದಿರುವ ಅನ್ಯಾಯದ ಪ್ರಕರಣ ಇದು. ಇಂಥ ನಿಯಮ ಉಲ್ಲಂಘನೆಯ ಪ್ರಕರಣ ನಿಮ್ಮ ಕಾಂಗ್ರೆಸ್ಸ ರ್ಕಾರದ ಆಡಳಿತದಲ್ಲಿ ನಡೆದಿದೆ. ಹೀಗಿರುವಾಗ ಈ ಪ್ರಕರಣ ಬಿಜೆಪಿ ಷಡ್ಯಂತ್ರದಿAದ ಕೂಡಿದೆ ಎನ್ನುವ ಮುಖಾಂತರ ಅರಳಿ ಅವರು ಏನು ಸಂದೇಶ ಕೊಡಲು ಹೊರಟಿದ್ದಾರೆʼ ಎಂದು ಪ್ರಶ್ನಿಸಿದ್ದಾರೆ.

ʼಜನಿವಾರ ತೆಗೆಯದಿದ್ದಕ್ಕೆ ವಿದ್ಯಾರ್ಥಿ ಸುಚಿವೃತಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದ ಘಟನೆಗೆ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಖಂಡನೆ ವ್ಯಕ್ತವಾಗಿವೆ. ಇದು ತಪ್ಪು ಎಂದು ಗೃಹ ಸಚಿವ ಡಾ.ಪರಮೇಶ್ವರ, ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್, ಮಧು ಬಂಗಾರಪ್ಪ, ಸಚಿವ ಎಂ.ಬಿ.ಪಾಟೀಲ್ ಇತರರು ಹೇಳಿಕೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಭಾನುವಾರ ಸುಚಿವೃತ ಮನೆಗೆ ಭೇಟಿ ನೀಡಿ, ಈ ಘಟನೆ ಖಂಡಿಸಿ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಕಲ್ಪಿಸುವ ಅಭಯ ನೀಡಿದ್ದಾರೆ. ಕೆಇಎ ನಿರ್ದೇಶಕ ಪ್ರಸನ್ನ ಅವರು ಇಲ್ಲಿ ತಪ್ಪು ಆಗಿದೆ ಎಂದು ಖುದ್ದು ಬಹಿರಂಗ ಕ್ಷಮೆ ಕೋರಿದ್ದಾರೆʼ ಎಂದು ಪಾಟೀಲ್ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

‌ʼಬೀದರ್ ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ತಪ್ಪು ಆಗಿರುವುದು ಸ್ಪಷ್ಟ ಎಂದು ವರದಿ ನೀಡಿದ್ದಾರೆ. ಇಲ್ಲಿ ವಿದ್ಯಾರ್ಥಿ ಮೇಲೆ ಅನ್ಯಾಯ ಆಗಿದೆ ಎಂದು ಎಲ್ಲರೂ ಹೇಳಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ನೊಂದ ವಿದ್ಯಾರ್ಥಿಗೆ ನ್ಯಾಯ ಕಲ್ಪಿಸುವ ಭರವಸೆ ಸಹ ನೀಡಿದ್ದಾರೆ. ಇದೆಲ್ಲದರ ನಡುವೆಯೂ ಅರಳಿ ಅವರು ಈ ಪ್ರಕರಣಕ್ಕೆ ಬಿಜೆಪಿ ಪಿತೂರಿ ಕಾರಣ ಎಂದು ಹೇಳಿರುವುದು ನೋಡಿದರೆ ಅವರ ಮಾನಸಿಕತೆ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ‌ʼ ಎಂದು ತಿರುಗೇಟು ನೀಡಿದ್ದಾರೆ.

ʼಜನಿವಾರ ವಿಷಯದಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ನಿಂದಿಸಿ, ಅವಮಾನಿಸಿದ ಘಟನೆ ಬೀದರ್ ಅಲ್ಲದೇ ಶಿವಮೊಗ್ಗ, ಮತ್ತಿತರೆ ಜಿಲ್ಲೆಗಳಲ್ಲಿ ಸಹ ನಡೆದಿದೆ. ತಾನೊಬ್ಬ ಪ್ರಗತಿಪರ ಚಿಂತಕ, ಸಾಮಾಜಿಕ ಸಮಾನತೆಗಾಗಿ ಹೋರಾಡುವ ನಾಯಕ ಎಂದು ಬಡಾಯಿಕೊಚ್ಚಿಕೊಳ್ಳುವ
ಅರಳಿಗೆ ಇಲ್ಲಿ ವಿದ್ಯಾರ್ಥಿ ಮೇಲೆ ಆದ ಅನ್ಯಾಯ, ಧರ್ಮನಿಂದನೆ ಕಂಡಿಲ್ಲವೆ? ಇದೇನಾ ನಿಮ್ಮ ಜಾತ್ಯತೀತ ನಿಲುವು? ಯಾರ ಮೇಲಾದರೂ ಅನ್ಯಾಯವಾದರೆ ಅವರಿಗೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಬೇಕೇ ವಿನಃ ಅಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದುʼ ಎಂದಿದ್ದಾರೆ.

ʼವಿದ್ಯಾರ್ಥಿ ಸುಚಿವೃತ ಜನಿವಾರದ ಜೊತೆಗೆ ಗೋಲಾಕಾರದ ಲೋಹದ ವಸ್ತು ತಂದಿದ್ದ. ಅದನ್ನು ತೆಗೆಯಲು ಹೇಳಿದ್ದಕ್ಕೆ ಪರೀಕ್ಷೆ ಬರೆಯದೆ ಮನೆಗೆ ವಾಪಸ್ ಹೋಗಿದ್ದಾನೆ ಎಂದು ಅರಳಿ ಹೇಳಿರುವುದು ಹಲವು ಶಂಕೆಗೆ ಕಾರಣವಾಗಿದೆ. ಈಗಾಗಲೇ ಹಿರಿಯ ಅಧಿಕಾರಿಗಳಿಂದ ನಡೆದ ತನಿಖೆ ವೇಳೆ ಇಂತಹ ಯಾವುದೇ ಬೆಳವಣಿಗೆ ನಡೆದಿರುವುದು ಗೊತ್ತಾಗಿಲ್ಲ. ಹೀಗಿರುವಾಗ ಅರಳಿ ಇವೆಲ್ಲ ಆರೋಪ ಮಾಡಿರುವುದು ಯಾವ ಆಧಾರದ ಮೇಲೆ? ಇವರಿಗೂ ಪರೀಕ್ಷಾ ಕೇಂದ್ರದವರಿಗೂ ಏನಾದರೂ ಲಿಂಕ್
ಇದೆಯಾ? ಈ ಸಂಬಂಧ ಜಿಲ್ಲಾಡಳಿತ ಅರಳಿಗೂ ವಿಚಾರಣೆಗೆ ಒಳಪಡಿಸಬೇಕುʼ ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ʼಅರಳಿ ಅವರು ಆಗಾಗ್ಗೆ ಅರ್ಥಹೀನ ಹೇಳಿಕೆ ನೀಡಿ ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಮಾಡುತ್ತಾರೆ. ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದರೂ ಜವಾಬ್ದಾರಿಯುತ ಹೇಳಿಕೆ ಕೊಡುವುದು ಕಲಿತಿಲ್ಲ. ಅಂತೆಯೇ ಕಾಂಗ್ರೆಸ್ ವರಿಷ್ಠರು ಇವರಿಗೆ
ಮತ್ತೊಂದು ಅವಕಾಶ ನೀಡದೆ ಮನೆಯಲ್ಲಿ ಕೂಡಿಸಿದ್ದಾರೆ. ತನ್ನ ಪಕ್ಷದಲ್ಲಿ ಅಕ್ಷರಶಃ ಮೂಲೆಗುಂಪಾಗಿರುವ ಅರಳಿ, ಇದೀಗ ಅಗ್ಗದ ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಸಚಿವರ ಹೇಳಿಕೆಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ! ಹಸಿ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಅರಳಿ ಕ್ಷಮೆ ಕೋರಬೇಕು. ಇನ್ಮುಂದೆ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಪಕ್ಷ ಸುಮ್ಮನಿರುವುದಿಲ್ಲʼ ಎಂದು ಸೋಮನಾಥ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಇದರಲ್ಲೆ ಅಲೊಲಾ, ದೇಶದೆಲ್ಲೆಡೆಯ ಗಲಾಟೆಗಳಿಗೆ ಬಿಜೆಪಿಯೇ ಕಾರಣ, ಬಂಗಾಳದಲ್ಲೂ ಈ ಬಿಜೆಪಿಯವರೇ ಕೋಂದಾಕಿ ಅದರ ಲಾಭ ಪಡೆಯಲ್ಲು ಪ್ರಯತ್ನಾ, ದೆಹಲಿಯಲ್ಲೂ ಕಾಶ್ಮೀರದಲ್ಲೂ, ರಾಜಾಸ್ಥಾನ, ಬೇರೆ ಎಲ್ಲೆಡೆಯೂ ಇವರದೆ ಕಿತಾಪತಿ,

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X