ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕದ ನಾಯಕ ಪೋಪ್ ಫ್ರಾನ್ಸಿಸ್ ನಿಧನರಾದರು ಎಂದು ವ್ಯಾಟಿಕನ್ ಸೋಮವಾರ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದೆ.
88 ವರ್ಷದ ಪೋಪ್ ಫ್ರಾನ್ಸಿಸ್ ಅವರು 12 ವರ್ಷಗಳಿಂದ ಪೋಪ್ ಆಗಿದ್ದಾರೆ. ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು.
ಇದನ್ನು ಓದಿದ್ದೀರಾ? ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ; ಏನಿದು ಒಪ್ಪಂದ?
ಭಾನುವಾರವಷ್ಟೇ ಪೋಪ್ ಫ್ರಾನ್ಸಿನ್ ಅವರು ಈಸ್ಟರ್ ಭಾನುವಾರದ ಸಂದೇಶ ನೀಡಿದ್ದರು. ಸೈಂಟ್ ಪೀಟರ್ ಬೆಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕೂತು ಪೋಪ್ ಭಕ್ತರಿಗೆ ದರ್ಶನ ನೀಡಿದ್ದರು. ಭಾಷಣದಲ್ಲಿ ಗಾಜಾದ ಯುದ್ಧ ಪರಿಸ್ಥಿತಿಯನ್ನು ಖಂಡಿಸಿದ್ದರು. ಕದನ ವಿರಾಮಕ್ಕೆ ಕರೆ ನೀಡಿದ್ದರು.
"Pope Francis died on Easter Monday, April 21, 2025, at the age of 88 at his residence in the Vatican's Casa Santa Marta," posts Vatican News (@VaticanNews). pic.twitter.com/pjcqL9OQ4f
— Press Trust of India (@PTI_News) April 21, 2025
ಇನ್ನು ಪೋಪ್ ಈಸ್ಟರ್ ಭಾಷಣ ಮಾಡುವ ಬಗ್ಗೆ ಮೊದಲೇ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಸಂತ ಪೀಟರ್ಸ್ ಚೌಕದಲ್ಲಿ ಸುಮಾರು 35 ಸಾವಿರ ಜನರು ಪೋಪ್ ಅನ್ನು ಕಾಣಲು ಬಂದಿದ್ದರು ಎಂದು ಹೇಳಲಾಗಿದೆ. ಇದಾದ ಮರುದಿನವೇ ಪೋಪ್ ನಿಧನದ ಸುದ್ದಿಯನ್ನು ವ್ಯಾಟಿಕನ್ ಪ್ರಕಟಿಸಿದೆ.
