ಕೃಷಿ ಹೊಂಡದಲ್ಲಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ರಾಯಚೂರು ತಾಲ್ಲೂಕಿನ ಕಸ್ಬೆ ಕ್ಯಾಂಪ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸುರೇಶ್ ಶರಣಪ್ಪ (25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.ರಾಯಚೂರು ತಾಲ್ಲೂಕು ನೆಲಹಾಳ ಗ್ರಾಮದ ನಿವಾಸಿ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ 5 ಲಕ್ಷ್ಯ ಪರಿಹಾರ
ಯುವಕರ ಗುಂಪೊಂದು ಈಜಾಡಲು ಹೋದಾಗ ನೀರಿನಲ್ಲಿ ಜಿಗಿದು ಮೇಲೆಕ್ಕೆ ಬರಲಿಲ್ಲ.ಯುವಕರು ಗಾಬರಿಗೊಂಡು ಆಶ್ಚರ್ಯವಾಗಿ ಗ್ರಾಮದವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಗ್ರಾಮದವರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.