ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದೇ ಖ್ಯಾತಿ ಪಡರದಿದ್ದ ಸ್ಟಾರ್ ಕ್ರಿಕೆಟಿಗ ಅಮಿತ್ ಮಿಶ್ರಾ ವಿರುದ್ಧ ಅವರ ಪತ್ನಿ ದೂರು ದಾಖಲಿಸಿದ್ದಾರೆ. ಅಮುತ್ ವಿವಾಹೇತರ ಸಂಬಂಧ ಹೊಂದಿದ್ದು, ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
2003ರಲ್ಲಿ ಭಾರತೀಯ ಕ್ರಿಕೆಟ್ ತಂಡ ಪ್ರವೇಶಿಸಿದ್ದ ಅಮಿತ್ ಮಿಶ್ರಾ 2021ರಲ್ಲಿ ಗರೀಮಾ ಅವರನ್ನು ವಿವಾಹವಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳಲ್ಲಿ ದಂಪತಿಗಳ ನಡುವೆ ಉಂಟಾಗಿದ್ದ ವೈಮನಸ್ಯ ಬಹಿರಂಗವಾಗಿದೆ. ಗರೀಮಾ ಅವರು ಅಮಿತ್ ವಿರುದ್ಧ ದೂರು ದಾಖಲಿಸಿದ್ದಾರೆ.
“ಅಮಿತ್ ಮತ್ತು ಅವರ ಕುಟುಂಬದವರು ಹಣಕ್ಕಾಗಿ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಅಮಿತ್ ಹಲವು ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ” ಎಂದು ಗರೀಮಾ ಆರೋಪಿಸಿದ್ದಾರೆ.
“ಅಮಿತ್ ಮತ್ತು ಅವರ ಕುಟುಂಬದವರು ಹೋಂಡಾ ಸಿಟಿ ಕಾರು ಕೊಡಿಸಬೇಕು, 10 ಲಕ್ಷ ರೂಪಾಯಿ ಹಣ ತರಬೇಕೆಂದು ಕಿರುಕುಳ ನೀಡುತ್ತಿದ್ದಾರೆ” ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
“ನನ್ನ ಮೇಲೆ ಅಮಿತ್ ಹಲವು ಬಾರಿ ಹಲ್ಲೆ ನಡೆಸಿದ್ದಾರೆ. ಹಿಂಸಿಸಿದ್ದಾರೆ. ಅವರ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿ ಕಾರಣಕ್ಕೆ, ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಪ್ರಸ್ತುತ ನನ್ನ ತಾಯಿ ಮನೆಯಲ್ಲಿ ಆಶ್ರಯ ಪಡೆದಿದ್ದೇನೆ” ಎಂದು ಗರೀಮಾ ಹೇಳಿದ್ದಾರೆ.
ಆರೋಪ ಅಲ್ಲಗಳೆದಿರುವ ಅಮಿತ್ ಮಿಶ್ರಾ, “ಆಕೆಯೇ ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ಕಿರುಕುಳ ನೀಡಿದ್ದಾರೆ. ಬ್ಯಾಂಕ್ ಕಚೇರಿ ಬಗ್ಗೆ ಗರೀಮಾ ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದರು. ಈಗ ನಾಟಕವಾಡುತ್ತಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಅಮಿತ್ ಮಿಶ್ರಾ ಅವರಯ 2003ರಲ್ಲಿ ಟೀಂ ಇಂಡಿಯಾ ಸೇರಿದರು. ಆರಂಭದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಆಡುತ್ತಿದ್ದರು. ಅವರಿಗೆ 2008ರಲ್ಲಿ ಟೆಸ್ಟ್ ಮತ್ತು 2010ರಲ್ಲಿ ಟಿ-20 ಕ್ರಿಕೆಟ್‌ನಲ್ಲಿಯೂ ಆಡುವ ಅವಕಾಶ ದೊರೆಯಿತು. ಭಾರತದ ಪರವಾರಿ 22 ಟೆಸ್ಟ್ (76 ವಿಕೆಟ್), 36 ಏಕದಿನ (64 ವಿಕೆಟ್) ಹಾಗೂ 10 ಟಿ20 (16 ವಿಕೆಟ್) ಪಂದ್ಯಗಳಲ್ಲಿ ಆಡಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ.
ಅಲ್ಲದೆ, ಐಪಿಎಲ್‌ನಲ್ಲಿ 162 ಪಂದ್ಯಗಳನ್ನು ಆಡಿರುವ ಅಮಿತ್, 174 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ, ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ.