ಸಂಸತ್ತಿನಲ್ಲಿ ಜಾರಿಯಾದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ವೆಲ್ಪರ್ ಪಾರ್ಟಿ ಆಫ್ ಇಂಡಿಯಾ ಪಕ್ಷ ತೀವ್ರ ವಿರೋಧಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿತು.
ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನಬದ್ಧ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಮತ್ತು ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗಿದೆ. ಇದು ಪ್ರಜಾಪ್ರಭುತ್ವ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ವಿರೋಧವಾಗಿದೆʼ ಎಂದು ದೂರಿದರು.
ವಕ್ಫ್ ತಿದ್ದುಪಡಿ ಕಾಯ್ದೆ ತಕ್ಷಣ ಹಿಂಪಡೆಯಬೇಕು. ಭಾರತೀಯ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ಖಚಿತಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು. ಯಾವುದೇ ಧಾರ್ಮಿಕ ಸಮುದಾಯದ ಆಂತರಿಕ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪಿಸಬಾರದು. ವಕ್ಫ್ ಬೋರ್ಡ್‌ನ ಸ್ವಾಯತ್ತತೆ ಮತ್ತು ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಮಂಡಿಸಿದರು.
ಪ್ರಮುಖರಾದ ಮುಬೀನ್ ಅಹಮದ್, ಸಲೀಂ ಚಿತಾಪುರಿ, ಬಾಬಾ ಹುಂಡೇಕರ್, ಫಹದ್ ಮೊಹಸಿನ್, ಹೈದರ್ ಅಲಿ ಬಾಗ್ಬಾನ್, ಮುಬಾಶ್ಶಿರ್, ಜಾಕಿರ್ ಹುಸೇನ್ ಸಾಬ್, ಹಾರೂನ್ ಖಾರಡಿ ಮತ್ತಿತರರು ಪಾಲ್ಗೊಂಡಿದ್ದರು.
ಜೇವರ್ಗಿಯಲ್ಲಿ ವಕ್ಫ್ ವಿರೋಧಿಸಿ ಪ್ರತಿಭಟನೆ :
ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಸಂವಿಧಾನ ರಕ್ಷಣೆ ಜನಾಂದೋಲನ ಸಮಿತಿ ಜಂಟಿಯಾಗಿ ಜೇವರ್ಗಿ ಬೃಹತ್ ಪ್ರತಿಭಟನೆ ನಡೆಯಿತು.
ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು, ಬಳಿಕ ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ʼವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ಹಲವು ಅಂಶಗಳು ಬಿಜೆಪಿಯ ರಾಜಕೀಯ ದ್ವೇಷ, ಅಸೂಯೆಯಿಂದ ಕೂಡಿದ್ದು, ದೇಶದ ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಯನ್ನಾಗಿಸಿ ಆ ಮೂಲಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸುವ ವ್ಯವಸ್ಥಿತ ಹುನ್ನಾರ ಈ ಕಾನೂನಿನಲ್ಲಿದೆ. ಕೂಡಲೇ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕುʼ ಎಂದು ಆಗ್ರಹಿಸಿದರು.
‘ಸಂಸತ್ತಿನಲ್ಲಿ ಅಂಗೀಕೃತವಾಗಿರುವ ಸಂವಿಧಾನ ವಿರೋಧಿ ವಕ್ಸ್ ತಿದ್ದುಪಡಿ ಕಾಯ್ದೆಯನ್ನು ಜಾರಿ ಆಗದಂತೆ ತಡೆಹಿಡಿದು ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಭೀಕರ ಕಾರು ಅಪಘಾತ : ಒಂದೇ ಕುಟುಂಬದ ಮೂವರ ಸಾವು
ಈ ಸಂದರ್ಭದಲ್ಲಿ ಪ್ರಮುಖರಾದ ಮಹಮ್ಮದ್ ಇಸುಬ್ ಕನ್ನಿ, ಮಹೇಶಕುಮಾರ ರಾಠೋಡ, ಬಾಬು ಪಾಟೀಲ, ಇಬ್ರಾಹಿಂ ಪಟೇಲ್ ಯಾಳವಾರ, ಸಿದ್ರಾಮ ಕಟ್ಟಿ, ಮೋಯಿಯುದ್ದೀನ್, ಇನಾಮ್ಹಾರ ರೌಫ್ ಹವಾಲ್ದಾರ್, ರಾಜಾಪಟೇಲ್ ಯಾಳವಾರ, ಅಬ್ದುಲ್ ಖಾದರ್, ಇಬ್ರಾಹಿಂ ಪಟೇಲ್ ಜೇವರ್ಗಿ, ಬಿ.ಸ್.ಮಾಲಿಪಾಟೀಲ್, ಮೆಹಬೂಬ್ ಮನಿಯಾರ ಮಳ್ಳಿ, ಮಲ್ಲಿಕಾರ್ಜುನ ನೆಲೋಗಿ, ಭೀಮರಾಯ ಉಸ್ಮಾನ್‌ಸಿಪಾಯಿ, ದುಮ್ಮದ್ರಿ, ಮೌಲಾಮೂಲಾ, ಸಿದ್ದು ಕೆರೂರ, ಅಜ್ಮೀರ್ ಪಟೇಲ್ ಯಡ್ರಾಮಿ ಭಾಗವಹಿಸಿದ್ದರು.