ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಗಂಭೀರ ಗಾಯಗೊಂಡ ಘಟನೆ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದಲ್ಲಿ ಜರುಗಿದೆ.
ಗುಂಡಪ್ಪ ಬಸಣ್ಣ ಬಡಗಿ (25) ಗಂಭೀರ ಗಾಯಗೊಂಡ ಯುವಕ ಎನ್ನಲಾಗಿದೆ.ಕುರಿ ಕಾಯಲು ಹೋದಾಗ ಸಂಜೆ ಏಕಾಏಕಿ ಗುಡುಗು ಸಹಿತ ಮಳೆ ಪ್ರಾರಂಭವಾಗಿದೆ.ಕುರಿಗಳನ್ನು ಹಿಂತಿರುಗಿ ಮನೆ ಕಡೆಗೆ ಬರುವಾಗ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ.
ಯುವಕನ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡ ಯುವಕನನ್ನು ಲಿಂಗಸುಗೂರಿನ ಬಸವಪ್ರಭು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆರೆಯಲ್ಲಿ ಬಿದ್ದು 10 ವರ್ಷದ ಬಾಲಕ ಸಾವು
ಯುವಕನ ಕುಟುಂಬಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಾಂತ್ವಾನ ಹೇಳಿದರು.ಪ್ರಕೃತಿ ವಿಕೋಪದಲ್ಲಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಒತ್ತಾಯಿಸಿದರು.
