“ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22, 2025 ರಂದು ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಭೀಕರ ಕುಕೃತ್ಯದ ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು” ಎಂದು ದಾವಣಗೆರೆಯಲ್ಲಿ ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಶ್ರೀಮತಿ ಕೆ.ಉಮಾ ಆಕ್ರೋಶ ವ್ಯಕ್ತಪಡಿಸಿದರು.

“ಜಮ್ಮು ಮತ್ತು ಕಾಶ್ಮೀರದಲ್ಲಿನ ಆರೋಪಿತ ‘ಜನಸಂಖ್ಯಾ ಬದಲಾವಣೆ’ಗೆ ಪ್ರತೀಕಾರವಾಗಿ ಕಾಶ್ಮೀರದ ಪಹಲ್ಗಾಮ್ ಬಳಿ ನಿಷೇಧಿತ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಸಹ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಕರ್ನಾಟಕದ ಇಬ್ಬರು ಸೇರಿದಂತೆ, 28 ಪ್ರವಾಸಿಗರನ್ನು ಹತ್ಯೆ ಮಾಡಿ, ಹತ್ತಾರು ಜನರನ್ನು ಗಾಯಗೊಳಿಸಿರುವುದಕ್ಕೆ ದೇಶದ ಸಮಸ್ತ ಜನರೊಂದಿಗೆ, ನಾವು ಕೂಡ ತೀವ್ರ ಆಘಾತವಾಗಿದೆ. ಇದು ಹೀನ ಕೃತ್ಯ” ಎಂದು ಘಟನೆಯನ್ನು ಖಂಡಿಸಿದರು.

“ಕೇಂದ್ರ ಸರ್ಕಾರ ಭಾರೀ ಪ್ರಮಾಣದ ಮಿಲಿಟರಿ ಸನ್ನದ್ಧತೆ ಮತ್ತು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿಕೊಂಡರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕ ಜನಸಾಮಾನ್ಯರ ರಕ್ಷಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಇದು ಸಾಬೀತುಪಡಿಸುತ್ತದೆ.
ಎಲ್ಲಾ ಮೃತರ ಕುಟುಂಬಗಳು ಮತ್ತು ಗಾಯಗೊಂಡವರಿಗೆ ಸರ್ಕಾರವು ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ಸಂತ್ರಸ್ತ ಕುಟುಂಬಗಳ ಸರಿಯಾದ ಪುನರ್ವಸತಿಯನ್ನು ನೋಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಾತಿ ಗಣತಿ ವರದಿ ವಿರೋಧ ಹಾಸ್ಯಾಸ್ಪದ, ವಿರೋಧಿಗಳಿಗೆ ಅಹಿಂದ ವರ್ಗಗಳ ತಕ್ಕ ಉತ್ತರ; ಜಿಬಿ ವಿನಯ್ ಕುಮಾರ್.
“ಈ ಭೀಕರ ಕುಕೃತ್ಯ ಎಸಗಿದ, ಯೋಜಿಸಿದ ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಮತ್ತು ದೇಶದ ಎಲ್ಲಾ ವರ್ಗದ ಜನರು ಈ ಭಯಾನಕ ಹತ್ಯೆಯ ವಿರುದ್ಧ ತಮ್ಮ ಬಲವಾದ ಪ್ರತಿಭಟನೆಯ ಧ್ವನಿಯನ್ನು ಎತ್ತಬೇಕು” ಎಂದು ಕರೆ ನೀಡಿದರು.