ಕಾಶ್ಮೀರದ ಪಹಲ್ಗಾವ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಅಮಾನವೀಯ ದುಷ್ಕೃತ್ಯ ವಾಗಿದೆ ನಿರಪರಾಧಿ ಜನರನ್ನು ಹತ್ಯೆ ಗೆಯ್ಯುವುದು ರಾಕ್ಷಸಿ ಕೃತ್ಯ ವಾಗಿದೆ. ಈ ಕೃತ್ಯವನ್ನುಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷರರಾದ ಇಸ್ಮಾಯಿಲ್ ಹುಸೈನ್ ಕಟಪಾಡಿ ಹೇಳಿದ್ದಾರೆ.
ಈ ಭಯೋತ್ಪಾದಕ ದಾಳಿಯ ಹಿಂದಿರುವ ಶಕ್ತಿಗಳನ್ನು ಕೇಂದ್ರ ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ವೇದಿಕೆ ಆಗ್ರಹಿಸುತ್ತದೆ.
ದಾಳಿಯಲ್ಲಿ ಮೃತಪಟ್ಟ ಸಂಬಂಧಿಕರಿಗೆ ಆಪ್ತರನ್ನು ಕಳಕೊಂಡ ದುಃಖವನ್ನು ತಾಳಿಕೊಳ್ಳುವ ಶಕ್ತಿಯನ್ನು ಸರ್ವಶಕ್ತನಾದ ಭಗವಂತನು ನೀಡಲಿ ಎಂದು ತಿಳಿಸಿದ್ದಾರೆ.