ಪಹಲ್ಗಾಮ್ ದಾಳಿ | ಇಸ್ಲಾಮಾಬಾದ್ ಜೊತೆ ನಂಟು ಕಲ್ಪಿಸುವುದು ಕ್ಷುಲ್ಲಕ ಮತ್ತು ಆಧಾರರಹಿತ: ಪಾಕಿಸ್ತಾನ

Date:

Advertisements

ಪಹಲ್ಗಾಮ್ ಭಯೋತ್ಪಾದನ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಪಹಲ್ಗಾಮ್ ದಾಳಿಯೊಂದಿಗೆ ಪಾಕಿಸ್ತಾನದ ನಂಟು ಕಲ್ಪಿಸುವುದು ಕ್ಷುಲ್ಲಕ ಮತ್ತು ಆಧಾರರಹಿತ ಪ್ರಯತ್ನ ಎಂದು ಹೇಖಿ ಪಾಕಿಸ್ತಾನದ ಸೆನೆಟ್ ಶುಕ್ರವಾರ ನಿರ್ಣಯವನ್ನು ಅಂಗೀಕರಿಸಿದೆ.

ಮಂಗಳವಾರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು 28 ಮಂದಿ ಸಾವನಪ್ಪಿದ್ದಾರೆ. ಮೃತರಲ್ಲಿ ಬಹುತೇಕರು ಪ್ರವಾಸಿಗರಾಗಿದ್ದಾರೆ. ಈ ದಾಳಿ ಬಳಿಕ ನಿಷೇಧಿತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಘಟಕ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತಿದೆ.

ಇದನ್ನು ಓದಿದ್ದೀರಾ? ಹತ್ಯೆಗೆ ಮುನ್ನ ಹೆಸರು ಕೇಳಿದ್ದೇಕೆ? ಪ್ರವಾಸಿಗರನ್ನೇ ಕೊಂದ ಮರ್ಮವೇನು

Advertisements

ಈ ಬೆನ್ನಲ್ಲೇ ಪಾಕಿಸ್ತಾನ ಸೆನೆಟ್ ನಿರ್ಣಯವನ್ನು ಮಂಡಿಸಿದೆ. ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್ ಈ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ಸಂಸತ್ತಿನ ಮೇಲ್ಮನೆಯಲ್ಲಿ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕಿದೆ.

“ಜಲ ಭಯೋತ್ಪಾದನೆ ಅಥವಾ ಮಿಲಿಟರಿ ಪ್ರಚೋದನೆ ಸೇರಿದಂತೆ ಯಾವುದೇ ಆಕ್ರಮಣದ ವಿರುದ್ಧ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಪಾಕಿಸ್ತಾನ ಸಂಪೂರ್ಣವಾಗಿ ಸಮರ್ಥವಾಗಿದೆ ಮತ್ತು ಸಿದ್ಧವಾಗಿದೆ” ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

“ದಾಳಿಯೊಂದಿಗೆ ಪಾಕಿಸ್ತಾನದ ನಂಟು ಕಲ್ಪಿಸುವುದು ಕ್ಷುಲ್ಲಕ ಮತ್ತು ಆಧಾರರಹಿತ ಪ್ರಯತ್ನವಾಗಿದೆ. ನಾಗರಿಕರನ್ನು ಕೊಲ್ಲುವುದು ಪಾಕಿಸ್ತಾನ ಎತ್ತಿಹಿಡಿದ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ನಿರ್ಣಯ ಹೇಳಿದೆ.

ಇದನ್ನು ಓದಿದ್ದೀರಾ? ಪಹಲ್ಗಾಮ್‌ ದಾಳಿ | ಭಯೋತ್ಪಾದನೆ ಬಗ್ಗೆ ಅಮಿತ್ ಶಾ ಹಳೆಯ ಹೇಳಿಕೆ ಮತ್ತೆ ವೈರಲ್

ಭಯೋತ್ಪಾದನೆಯನ್ನು ಸಂಕುಚಿತ ರಾಜಕೀಯ ಗುರಿಗಾಗಿ ಬಳಸಿಕೊಳ್ಳುವ ಮಾದರಿಯನ್ನು ಅನುಸರಿಸುವ ಪಾಕಿಸ್ತಾನವನ್ನು ಕೆಣಕಲು ಭಾರತ ಸರ್ಕಾರವು ನಡೆಸುತ್ತಿರುವ ಸಂಘಟಿತ ಮತ್ತು ದುರುದ್ದೇಶಪೂರಿತ ಅಭಿಯಾನವನ್ನು ಖಂಡಿಸುವುದಾಗಿ ನಿರ್ಣಯದಲ್ಲಿ ಹೇಳಲಾಗಿದೆ.

ಈ ಭಯೋತ್ಪಾದನ ದಾಳಿ ಬಳಿಕ ಭಾರತವು ಬುಧವಾರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. ಈ ಬಗ್ಗೆಯೂ ಪಾಕಿಸ್ತಾನ ನಿರ್ಣಯದಲ್ಲಿ ಉಲ್ಲೇಖಿಸಿದೆ. ‘ಈ ಕ್ರಮವು ಯುದ್ಧದ ಕೃತ್ಯ’ ಎಂದು ಹೇಳಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X