ತುಮಕೂರು | ಪತ್ರಕರ್ತರು ಸುದ್ದಿ ಮಾಡುವಾಗ ಸ್ವಯಂ ವಿಮರ್ಶೆಗೆ ಒಳಪಡುವ ಅಗತ್ಯವಿದೆ : ಎಸ್.ಪಿ.ಚಿದಾನಂದ್

Date:

Advertisements

ತುಮಕೂರು ನಗರದ ಕನ್ನಡ ಭವನದಲ್ಲಿ ಪ್ರಿಂಟ್ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಪತ್ರಕರ್ತರ ಸಂಘದ ನಿರ್ದೇಶಕರುಗಳ ಪದಗ್ರಹಣ ಸಮಾರಂಭ ನಡೆಯಿತು.

ಉದ್ಯಮಿ ಎಸ್.ಪಿ.ಚಿದಾನಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಆಂಗವಾಗಿದೆ.ಆದರೆ ಪತ್ರಕರ್ತರು ಸುದ್ದಿಗಳನ್ನು ಮಾಡುವಾಗ ಸ್ವಯಂ ವಿಮರ್ಶೆಗೆ ಒಳಪಡುವ ಅಗತ್ಯವಿದೆ.ಕಣ್ಣಿಗೆ ಕಂಡಿದೆಲ್ಲವೂ ಸತ್ಯವಲ್ಲ. ಪ್ರಾಮಾಣಿಸಿ ನೋಡುವ ಗುಣಗಳನ್ನು ಪತ್ರಕರ್ತರು ಬೆಳೆಸಿಕೊಳ್ಳ ಬೇಕು.ಆಗ ಮಾತ್ರ ಓದುಗರಿಗೆ,ನೋಡುಗರಿಗೆ ಸತ್ಯವನ್ನು ತಿಳಿಸಿದಂತಾಗುತ್ತದೆ. ಇಲ್ಲದಿದ್ದಲ್ಲಿ ಇದರಿಂದಾಗುವ ದುಷ್ಪರಿಣಾಮಗಳು ಊಹೆಗೆ ನಿಲುಕದ್ದು ಎಂಬ ಎಚ್ಚರಿಕೆಯನ್ನು ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಸಮಾಜದ ಅಂಕು ಡೊಂಕು ತಿದ್ದುವ ಮಾಧ್ಯಮಗಳು ಓದುಗರಿಗೆ, ನೋಡುಗರಿಗೆ ನಿಷ್ಠೆಯಿಂದ ಇರಬೇಕಾಗುತ್ತದೆ.ಇಲ್ಲದ ಗಾಳಿ ಸುದ್ದಿಗಳಿಗೆ ಬಣ್ಣ ಹಚ್ಚುವುದರಿಂದ ಸಮಾಜದ ಮೇಲಾಗುವ ಅಡ್ಡ ಪರಿಣಾಮಗಳ ಅರಿವು ವರದಿಗಾರ ಮತ್ತು ಸಂಪಾದಕ ಇಬ್ಬರಿಗೂ ಇರಬೇಕಾಗುತ್ತದೆ. ಪತ್ರಿಕೆಗಳಲ್ಲಿ ಬಂದ ಸುದ್ದಿ, ಲೇಖನಗಳಿಂದ ಸಮಾಜದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರನ ದೊರೆತಿದೆ.ಹಾಗಾಗಿ ಮಾಧ್ಯಮಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ,ಸರಕಾರಗಳು ಜನಪರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

Advertisements

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಖಂಡನೀಯ. ಈ ದೇಶದ ಪ್ರಜೆಗಳು ಮತ್ತು ಸಾರ್ವಭೌಮ ಮತ್ತು ಸೌಹಾರ್ದತೆ ಹಾಗೂ ಜಾತ್ಯತೀತವಾಗಿ ಇರಬೇಕು ಮನ್ನೆ ನಡೆದ ಕೃತ್ಯಕ್ಕೆ ನಾನು ಸಹ ಖಂಡಿಸುತ್ತೇನೆ ನಾವು ಭಾರತದಲ್ಲಿದ್ದೇವೆ ನಾವು ಭಾರತೀಯರು ಹಾಗಾಗಿ ಭಾರತೀಯರ ಮೇಲೆ ಈ ರೀತಿ ಕೃತ್ಯಗಳು ಪಾಕಿಸ್ತಾನದವರು ಪದೇ ಪದೇ ಮಾಡುತ್ತಿರುವುದು ಖಂಡನೀಯ ಎಂದರು.

ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ.ಪಹಲ್ಗಾಮ್ ನಲ್ಲಿ ನಡೆದಿರುವ ಕೃತ್ಯವನ್ನು ಬೆಂಬಲಿಸುವ ಮುಸ್ಲಿಂ ವ್ಯಕ್ತಿ, ಪ್ರವಾದಿ ಮಹಮದ್‌ರ ಬೋಧನೆಯಂತೆ ಮುಸ್ಲಿಂನಾಗಿರಲು ಸಾಧ್ಯವೇ ಇಲ್ಲ. ಘಟನೆ ನಡೆದ ದಿನದಿಂದಲೂ ಜನರಲ್ಲಿ ದುಖಃ ಮಡುಗಟ್ಟಿದೆ. ಸತ್ತವರಲ್ಲಿ ಮುಸ್ಲಿಂರೂ ಇದ್ದಾರೆ.ಸಾವನ್ನಪ್ಪಿದ ಎಲ್ಲರೂ ಭಾರತೀಯರು.ನಮ್ಮಲ್ಲಿ ಭೇಧ ಭಾವ ಬೇಡ.ನಾವೆಲ್ಲರೂ ಒಂದಾಗಿ, ದೇಶದ ರಕ್ಷಣೆ, ಐಕ್ಯತೆ ದುಡಿಯೋಣ. ಕೆಲ ಮಾಧ್ಯಮಗಳು ಇಡೀ ಘಟನೆಯನ್ನು ತಪ್ಪಾಗಿ ಬಿಂಬಿಸಿ,ಕೋಮು ಬಣ್ಣ ಕಟ್ಟಲು ಹೊರಟಿದ್ದಾರೆ. ನಾವು ಪ್ರಕಟಿಸುವ ಸುದ್ದಿಯಲ್ಲಿ ಪಾರದರ್ಶಕತೆ ಇರಲಿ. ಸತ್ಯಾಂಶವನ್ನು ಜನತೆಯ ಮುಂದಿಡಿ ಎಂದು ಇಕ್ಬಾಲ್ ಅಹಮದ್ ಮನವಿ ಮಾಡಿದರು.

ಪ್ರಿಂಟ್ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಸಿ.ಡಿ. ಕೃಷ್ಣಮೂರ್ತಿ,ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗ,ವಕೀಲರಾದ ಪಾವಗಡ ಶ್ರೀರಾಮ್,ಪ್ರ‍್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಜಿ.ಕೆ. ಕುಮಾರಸ್ವಾಮಿ, ಖಜಾಂಚಿ ಡಿ. ಚಂದ್ರಶೇಖರ್, ತುಮಕೂರು ಜಿಲ್ಲಾ ಅಧ್ಯಕ್ಷ ಕುಣಿಹಳ್ಳಿ ಆರ್. ಮಂಜುನಾಥ್ ಹಾಗೂ ನಿರ್ದೇಶಕರುಗಳು ಹಾಜರಿದ್ದರು.

ಇದೇ ವೇಳೆ ಇಬ್ಬರು ಪತ್ರಿಕಾ ವಿತರಕರಿಗೆ ಹೊಸ ಸೈಕಲ್‌ಗಳನ್ನು ದಾನಿಗಳ ನೆರವಿನೊಂದಿಗೆ ಉಚಿತವಾಗಿ ಸಂಘದ ವತಿಯಿಂದ ನೀಡಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X