ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನಲ್ಲಿ ಬಸವ ಹಾಗೂ ಅಂಬೇಡ್ಕರ್ ಯೋಜನೆಯಡಿ ಮಂಜೂರಾದ ಮನೆಗಳ ಹಂಚಿಕೆಯಲ್ಲಿ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಕನಕಗಿರಿಯ ಸುಳೇಕಲ್ ಗ್ರಾಮ ಪಂಚಾಯತಿಯಲ್ಲಿ ಇಂದು ನಡೆದ ಗ್ರಾಮಸಭೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಪಿಡಿಒ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
“ಸಭೆ ಆರಂಭಕ್ಕೂ ಮುನ್ನ ಪಿಡಿಒ ಹಾಗೂ ಸದಸ್ಯರು ಸ್ವತಃ ತಯಾರಿಸಿದ ಫಲಾನುಭವಿಗಳ ಪಟ್ಟಿಯನ್ನು ಸಭೆಯಲ್ಲಿ ಓದಿ, ʼಮನೆ ಹಂಚಿಕೆಯಲ್ಲಿ ಇದು ಅಂತಿಮ ಪಟ್ಟಿ, ಇವರೇ ಫಲಾನುಭವಿಗಳುʼ ಎಂದು ಘೋಷಿಸಿದರು. ಹಲವಾರು ಅರ್ಹ ಫಲಾನುಭವಿಗಳು ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ಆಕ್ಷೇಪಿಸಿದರು. ಗ್ರಾಮಸ್ಥರು ಜನರ ಒಪ್ಪಿಗೆ ಕೇಳದೇ ಇಂತಹ ತೀರ್ಮಾನ ತೆಗೆದುಕೊಂಡಿದ್ದು ತಪ್ಪು” ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಮಾಡದೇ ಅಂತಿಮವಾಗಿ ಹೆಸರು ಘೋಷಿಸಿ ಸಭೆಯನ್ನು ಮುಕ್ತಾಯಗೊಳಿಸಿದರು. ಈ ನಡೆ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಂಬಂಧಿಸಿದ ಅಧಿಕಾರಿ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
“ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಹೇಳಿದಂತೆ ನೀವು ಕೇಳಬೇಕು, ನೀವು ಹೇಳಿದಂತೆ ನಾವು ಕೇಳಲಾಗುವುದಿಲ್ಲ ಎಂದು ಆಕ್ಷೇಪಿಸಿದ ಫಲಾನುಭವಿಗಳ ಮೇಲೆ ಅಧಿಕಾರದ ದರ್ಪ ತೋರಿಸಿದ್ದಾರೆ. ಈ ಬಗ್ಗೆ ಹಿಂದೆ ಎರಡು ಸಾರಿ ಮನವಿ ಸಲ್ಲಿಸಿದ್ದರೂ ಅದಕ್ಕೆ ಯಾವುದೇ ಹಿಂಬರಹ ಕೊಡದೆ, ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಯಾರು ಹತ್ತು ಸಾವಿರ ರೂಪಾಯಿ ಕೊಡ್ತಾರೊ ಅವರಿಗೆ ಮನೆ ಹಂಚಿಕೆ ಮಾಡುತ್ತಾರೆ. ಅರ್ಹ ಫಲಾನುಭವಿಗಳು ಮನೆ ಕೇಳಿದರೆ.. ಪಟ್ಟಿ ಬಿಡುಗಡೆ ಆದ ನಂತರ ನೀವು ತಕರಾರು ಅರ್ಜಿ ಕೊಡಿ ಆಮೇಲೆ ನೋಡುತ್ತೇವೆ ಎನ್ನುವ ಹಾರಿಕೆ ಉತ್ತರ ಕೊಡುತ್ತಾರೆ” ಎಂದು ಮನೆ ವಂಚಿತ ಹನುಮೇಶ ಸುಳೇಕಲ್ ಆರೋಪಿಸಿದರು.
ಇದನ್ನೂ ಓದಿ: ಕೊಪ್ಪಳ | ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
“ತೋರಿಕೆಗೆ ಮಾತ್ರ ಸಭೆ ಕರೆಯಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಶಿವಾನಂದ ವಂಕಲುಕುಂಟ ಹಾಗೂ ಪಿಡಿಒ ಹನುಮಂತಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಗುಂಡಮ್ಮ, ರಮೇಶ ಗಣಗರ್, ಮಾಂತೇಶ್ ದಾಸನಾಳ, ಪಂಪಾಪತಿ ದೇಸಾಯಿ ಇವರೆಲ್ಲರೂ ಸೇರಿ ಅನರ್ಹ ಫಲಾನುಭವಿಗಳಿಗೆ ಮನೆಯನ್ನು ಹಂಚಿಕೆ ಮಾಡಿರುತ್ತಾರೆ. ಇವರ ಏಕಪಕ್ಷೀಯ ನಡೆಯಿಂದ ಅರ್ಹ ಬಡ ಫಲಾನುಭವಿಗಳಿಗೆ ಅನ್ಯಾಯವಾಗಿದೆ” ಎಂದು ಹನುಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಮನೆಯಿಲ್ಲ ಸರ