ಔರಾದ್ ಪಟ್ಟಣದ ಪತ್ರಿಸ್ವಾಮಿ ಪದವಿಪೂರ್ವ ಕಾಲೇಜಿನ ವಿದ್ಯಾ ಆರತಿ ರವೀಂದ್ರ ಪಿಯುಸಿ ಮರು ಮೌಲ್ಯಮಾಪನದಲ್ಲಿ 11 ಹೆಚ್ಚಿನ ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಎಸ್.ಕೆ.ಖಲೀಲ್ ತಿಳಿಸಿದ್ದಾರೆ.
ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿ ಆರತಿ ರವಿಂದ್ರ ಅವರಿಗೆ ಇಂಗ್ಲಿಷ್ ವಿಷಯದಲ್ಲಿ 10, ಜೀವಶಾಸ್ತ್ರದಲ್ಲಿ 1 ಸೇರಿದಂತೆ ಒಟ್ಟು 11 ಅಂಕಗಳು ಹೆಚ್ಚಾಗಿದ್ದು, ಈ ಹಿಂದೆ 560 ಅಂಕಗಳು ಹೊಂದಿರುವ ಆರತಿಗೆ ಇದೀಗ ಒಟ್ಟು 571 (95.16%) ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಇದೇ ಕಾಲೇಜಿನ ಶಿಫಾ ರಿಯಾಜೋದ್ದಿನ್ ಶೇಖ್ ವಿದ್ಯಾರ್ಥಿನಿ ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ ವಿಷಯದಲ್ಲಿ 11 ಅಂಕಗಳು ಹೆಚ್ಚಾಗಿದ್ದು, ಈ ಹಿಂದೆ 556 ಅಂಕಗಳು ಹೊಂದಿರುವ ಶಿಫಾ ಇದೀಗ 567 (94.50%) ಅಂಕ ಪಡೆದು ತಾಲ್ಲೂಕಿಗೆ ದ್ವೀತಿಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಔರಾದ್ ತಾಲೂಕು ಬಸವಕೇಂದ್ರಕ್ಕೆ ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ ನೇಮಕ
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಗುಂಡಪ್ಪ ಬಿರಾದಾರ್ ಉಪನ್ಯಾಸಕರಾದ ಅನೀಲಕುಮಾರ, ಆಜರಾ ಬೇಗಂ, ಅಕ್ಬರ್, ಮಹಾದೇವ, ಮುಕೇಶ, ಪವಿತ್ರಾ, ಶಿವಾಂಜಲಿ, ಮಯೂರಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
JEE