ಕಳೆದ ಆರು ವರ್ಷಗಳಲ್ಲಿಯೇ ಜೂನ್‌ನಲ್ಲಿ ಬೆಂಗಳೂರಿಗೆ ಕಡಿಮೆ ಮಳೆ

Date:

Advertisements
  • ಬೆಂಗಳೂರಿಗೆ ಜೂನ್‌ ತಿಂಗಳ ವಾಡಿಕೆ ಮಳೆ 110.3 ಮಿಮೀ
  • ರಾಜಧಾನಿಗೆ ನೀರಿನ ಅಭಾವ ಎದುರಾಗುವ ಸಾಧ್ಯತೆ

ರಾಜ್ಯಕ್ಕೆ ಮುಂಗಾರು ಮಾರುತಗಳು ತಡವಾಗಿ ಆಗಮಿಸಿದ್ದು, ಜೂನ್‌ ತಿಂಗಳಿನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಳೆಯಾಗಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಕೆಲವೆಡೆ ಜೋರು ಮಳೆಯಾದರೆ, ಇನ್ನೂ ಕೆಲವೆಡೆ ಮಳೆರಾಯನ ಆಗಮನವೇ ಆಗಿಲ್ಲ. ಜೂನ್ ತಿಂಗಳಿನಲ್ಲಿ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿದ ನಂತರ ಹವಾಮಾನ ತಜ್ಞರು ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ಅಲ್ಪ ಪ್ರಮಾಣದ ಮಳೆ ಸುರಿದು ನಿರೀಕ್ಷೆ ಸುಳ್ಳಾಗಿಸಿದೆ.

ಮಳೆಯ ಸುಳಿವೆಯೇ ಇಲ್ಲದ ಕಾರಣ ರಾಜ್ಯದ ಅನೇಕ ಡ್ಯಾಂಗಳು ಬರಿದಾಗಿವೆ. ರಾಜ್ಯಕ್ಕೆ ನೀರಿನ ಕೊರತೆ ಸೃಷ್ಟಿಯಾಗಿದೆ. ಅಲ್ಲದೆ, ದಿನದಿಂದ ದಿನಕ್ಕೆ ಕೃಷ್ಣರಾಜಸಾಗರ ಅಣೆಕಟ್ಟಿನ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ, ರಾಜಧಾನಿ ಬೆಂಗಳೂರಿಗೆ ನೀರಿನ ಅಭಾವ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

Advertisements

ರಾಜ್ಯದಲ್ಲಿ ಸುರಿಯದ ವಾಡಿಕೆ ಮಳೆ

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ, ರಾಜ್ಯಕ್ಕೆ ಜೂನ್‌ ತಿಂಗಳಿನಲ್ಲಿ ವಾಡಿಕೆಯಂತೆ 21.7 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 10.6 ಸೆಂ.ಮೀ ಮಳೆ ಸುರಿದಿದೆ. ರಾಜ್ಯದಲ್ಲಿ ಶೇ. 51% ರಷ್ಟು ಮಳೆಯ ಕೊರತೆಯಾಗಿದೆ. ಬೆಂಗಳೂರಿಗೆ 9 ಸೆಂ‌.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 7.2 ಸೆಂ‌.ಮೀ ಮಳೆಯಾಗಿದೆ. ಒಟ್ಟಾರೆ, 20% ಮಳೆ ಕಡಿಮೆಯಾಗಿದೆ.

ಅಂತೆಯೇ, ಕರಾವಳಿಗೆ ವಾಡಿಕೆ 97.9 ಸೆಂ.ಮೀ ಆಗಬೇಕಿದ್ದ ಮಳೆ 50.3 ಸೆಂ‌.ಮೀ ನಷ್ಟು ಸುರಿದಿದೆ. 26 % ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿಗೆ 16.1 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 7.4 ಸೆಂ ಮೀ ಮಳೆಯಾಗಿದ್ದು 54% ರಷ್ಟು ಮಳೆಯ ಕೊರತೆ ಎದುರಾಗಿದೆ. ಬೆಂಗಳೂರು‌ ಗ್ರಾಮಾಂತರಕ್ಕೆ ವಾಡಿಕೆ ಮಳೆ 6.9 ಸೆಂ‌.ಮೀ‌ ಇತ್ತು. ಇದೀಗ 5.9 ಸೆಂ‌.ಮೀ ಮಳೆಯಾಗಿದೆ. 14 % ಕಡಿಮೆಯಾಗಿದೆ.

2023ರ ಜೂನ್ ತಿಂಗಳಿನಲ್ಲಿ ಕಳೆದ ಆರು ವರ್ಷಗಳಲ್ಲಿ ಬೆಂಗಳೂರಿಗೆ ಅತ್ಯಂತ ಕಡಿಮೆ ಮಳೆ ಬಿದ್ದಿದ್ದು, ಈ ಬಾರಿ ಬಿಸಿಲು ಜನರ ನೆತ್ತಿ ಸುಡುವಂತಿತ್ತು.

2018ರಲ್ಲಿ ನಗರದಲ್ಲಿ ಜೂನ್‌ನಲ್ಲಿ 91.5 ಮಿಮೀ ಮಳೆಯಾಗಿದೆ. ಇದರ ನಂತರ 2019, 2020 ಮತ್ತು 2021 ರಲ್ಲಿ ಕ್ರಮವಾಗಿ 83.3 ಮಿಮೀ, 115.8 ಮಿಮೀ ಮತ್ತು 92.1 ಮಿಮೀ ಮಳೆ ಸುರಿದಿದೆ. 2022 ಜೂನ್‌ನಲ್ಲಿ ಬೆಂಗಳೂರಿನಲ್ಲಿ 207.7 ಮಿಮೀ ಅಧಿಕ ಮಳೆಯಾಗಿದೆ.

“ಬೆಂಗಳೂರಿನಲ್ಲಿ ಸಾಮಾನ್ಯ ಜೂನ್ ಮಳೆಯ ಪ್ರಮಾಣ 110.3 ಮಿಮೀ ಆದರೆ, ಈ ವರ್ಷ ಕೇವಲ 80 ಮಿಮೀ ಮಳೆಯಾಗಿದೆ. ಇದು ದೊಡ್ಡ ಕೊರತೆಯಲ್ಲ. ಏಕೆಂದರೆ ರಾಜ್ಯದ ಇತರ ಹಲವು ಭಾಗಗಳಲ್ಲಿ ಶೇ.50-80ರಷ್ಟು ಮಳೆಯ ಕೊರತೆಯಿದೆ” ಎಂದು ಬೆಂಗಳೂರಿನ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಎ ಪ್ರಸಾದ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಸಿಬಿ ದಾಳಿ ಬಳಿಕ ಇ-ಸಿಗರೇಟ್ ಮಾರಾಟ ಮಳಿಗೆಗೆ ಸೀಲ್

ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಜುಲೈ ಮಳೆಯ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಕೆಲವು ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತವೆ ಮತ್ತು ಬೆಂಗಳೂರಿನಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ವಾರಗಳ ಕಾಲ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X