ಸಂವಿಧಾನ ರಕ್ಷಣೆ ಮಾಡುವುದೆಂದರೆ ನಮ್ಮ ಹಕ್ಕು, ನಮ್ಮ ಬದುಕುಗಳನ್ನು ಉಳಿಸಿಕೊಳ್ಳುವುದು ಎಂದರ್ಥವಾಗಿದೆ. ನಾವು ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಈ ಸಂವಿಧಾವನ್ನು ಯಾರೂ ಕೊಟ್ಟದ್ದಲ್ಲ. ಅದನ್ನು ನಾವೂ ಒಪ್ಪಿಕೊಂಡಿದ್ದೇವೆ. ಅದಕ್ಕೆ ಅಪಾಯ ಬಂದಾಗ ಅದನ್ನು ಉಳಿಸಿಕೊಳ್ಳಬೇಕಿರುವುದು ನಮ್ಮ ಜವಾಬ್ದಾರಿ ಎಂದು ಬಡಗಲಪುರ ನಾಗೇಂದ್ರ ಅವರು ಹೇಳಿದರು.
ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಕರ ಪಡೆ ಕಟ್ಟುವ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಮಾತನಾಡಿದ ಅವರು, “ವಿಶೇಷವಾಗಿ ಕರ್ನಾಟಕ ಬಸವಣ್ಣನವರು ನಾಡು. ಸಂವಿಧಾನ ಬರುವುದಕ್ಕೆ ಮುಂಚೆಯೇ ಇಲ್ಲಿ ಭ್ರಾತೃತ್ವ ಇತ್ತು. ಒಂದು ಧರ್ಮವನ್ನು ಮತ್ತೊಂದು ಧರ್ಮ ಗೌರವಿಸುವ ಪರಂಪರೆ ಇತ್ತು. ಅದರೆ ಈಗ ಅದನ್ನು ನಾಶ ಮಾಡಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿಜೆಪಿಗರು ಬಾಬಾ ಸಾಹೇಬರ ಸಂವಿಧಾನವನ್ನು ಮುಗಿಸಲು ತೀರ್ಮಾನಿಸಿದ್ದಾರೆ: ಜಿಗ್ನೇಶ್ ಮೇವಾನಿ
“ಸಂವಿಧಾನಕ್ಕೆ ಅಪಾಯವಿರುವಂಥದ್ದು ಬಂಡವಾಳ ಶಾಹಿ ವ್ಯವಸ್ಥೆಯಿಂದಾಗಿದೆ. ಅದಕ್ಕೆ ಪೂರವಕವಾಗಿ ಆಡಳಿತ ನಡೆಸುತ್ತಿರುವುದು ನಮ್ಮ ಸರ್ಕಾರಗಳಾಗಿವೆ. ನಾವು ಬೀದಿಯಲ್ಲಿ ಹೇಳುವುದನ್ನು ಸಂಸತ್ತಿನಲ್ಲಿ ಕಾನೂನಾಗಬೇಕು. ಆ ಮಟ್ಟಿನ ಹೋರಾಟ ಮಾಡಬೇಕಿದೆ. ಮುಂಬರುವ ಸಾಮೂಹಿಕ ಹೋರಾಟ ಆ ನಿಟ್ಟಿನಲ್ಲಿ ನಡೆಯಬೇಕು. ಅಂತಹ ಹೋರಾಟ ಈ ತಿಂಗಳ 20ರಂದು ನಡೆಯುತ್ತಿದ್ದು, ಅದಕ್ಕೆ ಎಲ್ಲರೂ ಬೆಂಬಲ ನೀಡಬೇಕು” ಎಂದರು.