ಬ್ರಿಟಿಷ್ ಸರ್ಕಾರದಲ್ಲಿ ಸಚಿವರಾಗಿ 7 ವಿವಿಧ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಸರ್. ಸಿದ್ದಪ್ಪ ಕಂಬಳಿಯವರು ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸುವಂತೆ ಹೋರಾಡಿದವರು ಎಂದು ಮಹಾಪೌರ ರಾಮಪ್ಪ ಕೃಷ್ಣಪ್ಪ ಬಡಿಗೇರ್ ಹೇಳಿದರು.
ಸರ್.ಸಿದ್ದಪ್ಪ ಕಂಬಳಿ ಪುಣ್ಯಸ್ಮರಣೆ ಅಂಗವಾಗಿ ಹುಬ್ಬಳ್ಳಿ ಮಹಾನಗರ ಪಾಲಿಕೆ ಹತ್ತಿರದ ಕಂಬಳಿ ಸಿದ್ದಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸರ್.ಸಿದ್ದಪ್ಪ ಕಂಬಳಿಯವರು ಬ್ರಿಟಿಷ್ ಸರ್ಕಾರದಲ್ಲಿ ಸಚಿವರಾಗಿ 7 ವಿವಿಧ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದವರು. ಮತ್ತು ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸುವಂತೆ ಹೋರಾಡಿದವರು. ಬಡವರ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಅವರ ಸ್ಮರಣೆ ನಿತ್ಯ ನಿರಂತರವಾಗಲಿ ಎಂದರು.
ನಂತರ ನಗರದ ಅಳಗುಂಡಗಿ ಓಣಿಯಲ್ಲಿರುವ ವಸ್ತು ಸಂಗ್ರಹಾಲಯವಾಗಿ ಪರಿವರ್ತನೆಯಾಗಿರುವ ಸರ್.ಸಿದ್ದಪ್ಪ ಕಂಬಳಿ ಮನೆಗೆ ಭೇಟಿ ನೀಡಿ ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಉಪ ಮಹಾ ಪೌರರಾದ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಂಬಳಿ ಯವರ ಕುಟುಂಬ, ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ ಸವಣೂರು ಹಾಗೂ ಸಾರ್ವಜನಿಕರು, ಪಾಲಿಕೆ ಸಿಬ್ಬಂದಿ ವರ್ಗದವರು ಇದ್ದರು.