ಬೆಂಗಳೂರು, ಹೈದರಾಬಾದ್ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ನಲ್ಲಿರುವ ಜಿಸಿಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವೃತ್ತಿಪರರು ಕಚೇರಿಗೆ ಒಂದು ಮಾರ್ಗವಾಗಿ ಪ್ರಯಾಣಿಸಲೆಂದೇ 45 ರಿಂದ 55 ನಿಮಿಷಗಳವರೆಗೆ ಕಳೆಯುತ್ತಾರೆ ಎಂದು ಹೊಸ ವರದಿಯೊಂದು ತಿಳಿಸಿದೆ. ಇದರರ್ಥ ಒಬ್ಬ ಉದ್ಯೋಗಿ ತನ್ನ ಜೀವಿತಾವಧಿಯ ಸುಮಾರು ಶೇಕಡ 5ರಷ್ಟು ಸಮಯವನ್ನು ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಕಳೆಯುತ್ತಾರೆ.
2025ರ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಪ್ರಯಾಣದ ಬಗ್ಗೆ ಸಂಶೋಧನೆ ಮಾಡಿರುವ MoveInSync ವರದಿಯ ಪ್ರಕಾರ, ಬೆಂಗಳೂರಿನಲ್ಲಿ, ವೃತ್ತಿಪರರು ಸುಮಾರು 50 ನಿಮಿಷಗಳಲ್ಲಿ 15 ಕಿ.ಮೀ ಪ್ರಯಾಣಿಸುತ್ತಾರೆ. ಇತರೆ ಉದ್ಯೋಗಿಗಳು ಅಷ್ಟೇ ಪ್ರಯಾಣ ಮಾಡಲು 54 ನಿಮಿಷಗಳವರೆಗೆ ಕಳೆಯುತ್ತಾರೆ. ಐಟಿ ವೃತ್ತಿಪರರು ಸ್ವಲ್ಪ ವೇಗವಾಗಿ (ಮೆಟ್ರೋ ಮೊದಲಾದವುಗಳ ಬಳಕೆ) 46 ನಿಮಿಷಗಳು ಪ್ರಯಾಣಕ್ಕಾಗಿ ಕಳೆಯುತ್ತಾರೆ.
ಇದನ್ನು ಓದಿದ್ದೀರಾ? ಬೆಂಗಳೂರು ಬಂದ್ | ರಸ್ತೆಗಿಳಿಯದ ಖಾಸಗಿ ವಾಹನ; ಪ್ರಯಾಣಿಕರ ಪರದಾಟ
ಹೈದರಾಬಾದ್‌ನಲ್ಲಿ ವೃತ್ತಿಪರ ಕ್ಷೇತ್ರದ ಉದ್ಯೋಗಿಗಳು 45 ನಿಮಿಷಗಳಲ್ಲಿ ಸುಮಾರು 16 ಕಿ.ಮೀ ಪ್ರಯಾಣಿಸುತ್ತಾರೆ. ಆದರೆ ಇತರೆ ಉದ್ಯೋಗಿಗಳಿಗೆ ಅಷ್ಟೇ ದೂರ ಪ್ರಯಾಣಿಸಲು 54 ನಿಮಿಷಗಳು ಬೇಕಾಗುತ್ತದೆ.
ದೆಹಲಿ, ಗುರುರಾಮ್, ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿ 22 ಕಿ.ಮೀ. ಪ್ರಯಾಣಕ್ಕೆ 55 ನಿಮಿಷಗಳವರೆಗೆ ಬೇಕಾಗುತ್ತದೆ. ಅದರಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರು ಹೆಚ್ಚು ಕಾಲ ಪ್ರಯಾಣಕ್ಕಾಗಿ ಮುಡಿಪಾಗಿ ಇಡಬೇಕಾಗುತ್ತದೆ. ಆರೋಗ್ಯ ಕ್ಷೇತ್ರದವರಿಗೆ ತಮ್ಮ ಕಚೇರಿಯನ್ನು ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.
ಬೆಂಗಳೂರು ಮತ್ತು ಹೈದರಾಬಾದ್ ವೃತ್ತಿಪರರು ಸಾಮಾನ್ಯವಾಗಿ ವಾರದಲ್ಲಿ ಎರಡರಿಂದ ಮೂರು ದಿನಗಳು ಪ್ರಯಾಣಿಸುತ್ತಾರೆ. ಆದರೆ ಎನ್‌ಸಿಆರ್‌ನಲ್ಲಿ ಉದ್ಯೋಗಿಗಳು ಆಗಾಗ್ಗೆ ಪ್ರಯಾಣಿಸುತ್ತಾರೆ. ಬುಧವಾರ ಮೂರು ನಗರಗಳಲ್ಲಿ ಅತ್ಯಧಿಕವಾಗಿ ಕಚೇರಿಗೆ ಪ್ರಯಾಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸೋಮವಾರ ಮತ್ತು ಶುಕ್ರವಾರಗಳು ಕಡಿಮೆ ಜನಸಂದಣಿ ಇರುತ್ತದೆ ಎಂದು ವರದಿ ಹೇಳುತ್ತದೆ.
