ಉಡುಪಿಯ ಇಂದ್ರಾಳಿಯ ರೈಲು ನಿಲ್ದಾಣದ ಸನಿಹ ಹಳಿಯಲ್ಲಿ ಯುವಕನ ಶವವು ಶನಿವಾರ ರಾತ್ರಿ ಪತ್ತೆಯಾಗಿರುವ ಘಟನೆ ನಡೆದಿದೆ.
ಚಲಿಸುವ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ.
ಘಟನಾ ಸ್ಥಳದಲ್ಲಿದ್ದು ರೈಲ್ವೇ ಇನ್ಸಪೆಕ್ಟರ್ ಮಧುಸೂದನ್, ಮತ್ತು ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ರಾಮ್ ಪ್ರಭು, ಹೆಡ್ ಕಾನ್ಸಟೇಬಲ್ ಶ್ರವಣ್ ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಶವವನ್ನು ಮರಣೋತ್ತರ ಪರೀಕ್ಷೆಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.