5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಪ್ರಕರಣದ ಆರೋಪಿ ರಿತೇಶ್‌ಕುಮಾರ್ ಪೊಲೀಸರಿಂದ ಹತ್ಯೆಯಾಗಿ 14 ದಿನಗಳು ಕಳೆದರೂ ಆರೋಪಿ ಮೃತದೇಹ ಕಿಮ್ಸ್ ಶವಾಗಾರದಲ್ಲೇ ಇದ್ದು, ಆತನ ಸಂಬಂಧಿಕರ ಸುಳಿವೂ ಸಿಕ್ಕಿಲ್ಲ.
ಕಳೆದ 14 ದಿನಗಳಿಂದ ಆರೋಪಿ ರಿತೇಶ್ ಕುಮಾರ್ ಶವ ಕೆಎಂಸಿ-ಆರ್‌ಐ ಶವಾಗಾರದಲ್ಲೇ ಇದ್ದು, ಮೃತ ಆರೋಪಿ ಕುಟುಂಬಸ್ಥರ ಪತ್ತೆಗೆ ಹುಬ್ಬಳ್ಳಿ ಪೊಲೀಸರು ತೆರಳಿದ್ದು, ಇನ್ನೂ ಆತನ ವಾರಸುದಾರರ ಪತ್ತೆಯಾಗಿಲ್ಲ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಗಾಂಜಾ ವಿಚಾರಕ್ಕೆ ಜಗಳ; ಪೊಲೀಸ್ ಎದುರೇ ತಲ್ವಾರ್ ಹಿಡಿದು ದಾಳಿಗೆ ಬಂದ ಪುಡಾರಿಗಳು
ರಿತೇಶಕುಮಾರ್‌ನ ಭಾವಚಿತ್ರ ಹಿಡಿದು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ ಮತ್ತು ಅನ್ಯ ರಾಜ್ಯಗಳಿಗೂ ಭೇಟಿ ನೀಡುತ್ತಾ, ಕುಟುಂಬಸ್ಥರ ಪತ್ತೆಯಲ್ಲಿದ್ದಾರೆ. ಶವದ ಅಂತ್ಯಕ್ರಿಯೆ ಮಾಡಿದರೆ ಸಾಕ್ಷಿ ನಾಶವಾಗುತ್ತದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಏ. 28 ರಂದು ತೀರ್ಪು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.