ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಮೇಲೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರವು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಒಳಗೊಂಡು 16 ಪಾಕಿಸ್ತಾನಿಯರ ಯೂಟ್ಯೂಬ್ ಚಾನೆಲ್‌ಗಳನ್ನು ಇಂದಿನಿಂದ ನಿಷೇಧಿಸಿದೆ.
ಪಾಕ್ ಮೂಲದ ಯೂಟ್ಯೂಬ್ ಚಾನಲ್‌ಗಳನ್ನು ತೆರೆಯಲು ಹೋದರೆ “ಕೇಂದ್ರ ಸರ್ಕಾರದ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಸಂಬಂಧ ಸರ್ಕಾರದ ಆದೇಶದ ಅನುಸಾರ ಈ ದೇಶದಲ್ಲಿ ಈ ಚಾನೆಲ್ ಲಭ್ಯವಿರುವುದಿಲ್ಲ. ಸರ್ಕಾರದ ಸ್ಥಗಿತದ ಹೆಚ್ಚಿನ ಮಾಹಿತಿಗಾಗಿ ಗೂಗಲ್‌ನ transparencyreport.google.com ಜಾಲತಾಣಕ್ಕೆ ಭೇಟಿ ನೀಡಿ” ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ.
ಅದೇ ರೀತಿ ಡಾನ್ ನ್ಯೂಸ್, ಎಆರ್‌ವೈ ನ್ಯೂಸ್, ಸಮಾ ಟಿವಿ ಮತ್ತು ಜಿಯೋ ನ್ಯೂಸ್ ಸೇರಿದಂತೆ ಹಲವಾರು ಸುದ್ದಿ ವಾಹಿನಿಗಳ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಸಹ ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಕೇಂದ್ರದ ನಿಷೇಧದಿಂದ ಪಾಕಿಸ್ತಾನದ ಶೋಯೆಬ್ ಅಖ್ತರ್, ಆರ್ಜೊ ಕಮ್ಜಿ, ಸಯ್ಯದ್ ಮುಜಮಿಲ್ ಸೇರಿದಂತೆ ಮುಂತಾದ ಪ್ರಖ್ಯಾತರ ಯೂಟ್ಯೂಬ್ ಚಾನೆಲ್‌ಗಳು ಭಾರತದಲ್ಲಿ ಲಭ್ಯವಾಗುವುದಿಲ್ಲ.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ 26 ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ಘಟನೆಯ ನಂತರ ಎರಡೂ ದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಂದಿನಿಂದ ಎರಡೂ ದೇಶಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.