ಕಾಡಾನೆ ದಾಳಿಗೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಅಮೃತೇಶ್ವರ ಕಾಫಿ ತೋಟದ ಮಾಲಿಕ ಮೃತ ವ್ಯಕ್ತಿ ಷಣ್ಮುಖ(45), ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ. ತೋಟದಲ್ಲಿ ಕೆಲಸ ಮಾಡಿಸಲು ತೆರಳಿದ ಸಂದರ್ಭದಲ್ಲಿ, ಈ ದುರ್ಘಟನೆ ನಡೆದಿದೆ.
ಮೃತ ಷಣ್ಮುಖ 15 ಎಕರೆ ಕಾಫಿ ತೋಟ ಹೊಂದಿದ್ದು, ರಾತ್ರಿಯಿಂದಲೇ ಆನೆಗಳ ಹಿಂಡು ತೋಟದಲ್ಲಿ ಬೀಡು ಬಿಟ್ಟಿದೆ ಎಂದು ಅರಣ್ಯ ಇಲಾಖೆಯವರು ಎಲ್ಲೆಡೆ ಕರೆ ಕೊಟ್ಟಿದ್ದರು. ಈ ಮಾಹಿತಿ ಷಣ್ಮುಖ ಅವರಿಗೂ ತಿಳಿದಿತ್ತು, ಆದರೂ ತೋಟಕ್ಕೆ ತೆರಳಿದ್ದಾರೆ. ಬೆಳಗ್ಗೆ ತೋಟಕ್ಕೆ ಹೋದವರು ಮನೆಗೆ ಹಿಂದುರುಗಿ ಬರದೇ ಇದ್ದಾಗ ಅವರ ಕುಟುಂಬದವರು ಸಮೀಪದವರಿಗೆ ತಿಳಿಸಿದ್ದಾರೆ, ಸ್ಥಳಕ್ಕೆ ಹೋಗಿ ನೋಡಿದಾಗ ಷಣ್ಮುಖ ಮೃತ ಪಟ್ಟಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಏ.28 ರಂದು ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಈ ಘಟನೆ ಕುರಿತು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲಿಸಿ ದಯವಿಟ್ಟು ತೋಟ ಮತ್ತೆ ಗದ್ದೆಗೆ ಹೋಗುವವರು ಬೈಕಿನಲ್ಲಿ ತಿರುಗಾಡುವವರು ಗ್ರಾಮದ ಜನರು ಅತಿ ಎಚ್ಚರಿಕೆಯಿಂದ ಜಾಗರೂಕತೆಯಿಂದ ಓಡಾಡಬೇಕಾಗಿ ಅಧಿಕಾರಿಗಳು ತಿಳಿಸಿದರು.
