ಗಾಂಧಿಯವರ ವಿಚಾರಗಳು ಮತ್ತು ಚಿಂತನೆಗಳು ಎಂದೆಂದಿಗೂ ಸಾರ್ವಕಾಲಿಕ. ಇಂದಿನ ಯುವ ಸಮುದಾಯ ಗಾಂಧಿಯವರ ಜೀವನ ಚರಿತ್ರೆ ತಿಳಿದುಕೊಳ್ಳುವುದು ಮತ್ತು ಅವರು ನಡೆಸಿದ ಜೀವನ ಶೈಲಿ ತಿಳಿದುಕೊಳ್ಳುವುದು ಅತ್ಯವಶ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ ಕೃಷ್ಣ ಹೇಳಿದರು.
ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ “ಯುವ ಸಮುದಾಯಕ್ಕಾಗಿ ಗಾಂಧಿ” ಶಿಬಿರವನ್ನು
ಉದ್ಘಾಟಿಸಿ ಮಾತನಾಡಿದ ಅವರು, “ಗಾಂಧಿಯವರ ವಿಚಾರಧಾರೆಗಳು ಅಂದಿಗಿಂತ ಹೆಚ್ಚಾಗಿ ಇಂದಿಗೆ ಅನಿವಾರ್ಯವಾಗಿವೆ. ಯುವ ಪೀಳಿಗೆ ಅವರ ಅಹಿಂಸಾ ದಾರಿಯಲ್ಲಿ ನಡೆದು ಅವರ ಕನಸುಗಳನ್ನು ಸಾಕಾರಗೊಳಿಸಬೇಕು. ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಕೈಗೊಳ್ಳುವುದೂ ಅಗತ್ಯ” ಎಂದು ಹೇಳಿದರು.
ರಂಗ ನಿರ್ದೇಶಕ ಶ್ರೀಪಾದ ಭಟ್ ಮಾತನಾಡಿ, “ಇಂದಿನ ದಿನಗಳಲ್ಲಿ ಗಾಂಧಿ ಕುರಿತು ಹಲವರಿಗೆ ವಿರೋಧ ಭಾವನೆ ಇದೆ. ಅವರಿಗೆ ಅಪಪ್ರಚಾರ ಮಾಡುವ ಕಾರ್ಯಗಳು ನಡೆಯುತ್ತಿವೆ. ಇದೆಲ್ಲವನ್ನು ಯುವ ಸಮುದಾಯ ಈ ಗಾಂಧೀ ಶಿಬಿರದ ಮೂಲಕ ಗಾಂಧಿಯ ತತ್ವಗಳು, ಚಿಂತನೆಗಳ ಕುರಿತು ಡಿಜಿಟಲ್ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು. ಗಾಂಧಿಯ ಬಗ್ಗೆ ಇರುವ ಊಹಾಪೋಹಗಳ ಬಗ್ಗೆ ಸ್ಪಷ್ಟತೆ ನೀಡಬೇಕು” ಎಂದರು.
ಇದನ್ನೂ ಓದಿ: ಬೆಂಗಳೂರು | 400 ಮರಗಳ ಮಾರಣಹೋಮಕ್ಕೆ ರೈಲ್ವೆ ಸಿದ್ಧತೆ; ಪರಿಸರವಾದಿಗಳ ಆಕ್ರೋಶ
ಕಾರ್ಯಕ್ರಮದಲ್ಲಿ ಅನಂತ ಶಾಂದ್ರೆಯ, ಜಗದೀಶ್, ವಿಜಯ ಹನಕೆರೆ, ತನುಜ್ ಸೇರಿದಂತೆ ಇತರರು ಇದ್ದರು.