ರಾಯಚೂರು ತಾಲೂಕಿನ ಬೂರ್ದಿಪಾಡ ಗ್ರಾಮದ ಭರತ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 567 ನೇ ಬ್ಯಾಂಕ್ ಪಡೆಯುವ ಮೂಲಕ ಐಎಎಸ್ ಶ್ರೇಣಿ ಹುದ್ದೆಗೆ ಅರ್ಹರಾಗಿದ್ದಾರೆ.
ಕಳೆದ ವರ್ಷ ಇದೇ ಯುಪಿಎಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಹುದ್ದೆಗೆ ಆಯ್ಕೆಯಾಗಿ ಹೈದ್ರಾಬಾದಿನ ಐಪಿಎಸ್ ಪೊಲೀಸ್ ತರಬೇತಿ ಅಕಾಡೆಮಿಗೆ ಸೇರಿ ಪುನಃ 2024ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 567ನೇ ರ್ಯಂಕ್ ಗಳಿಸುವ ಮೂಲಕ ಐಎಎಸ್ ಹುದ್ದೆಗೆ ಭರತ್ ಸಿ ಯರ್ರಮ್ ಆಯ್ಕೆಗೊಂಡಿದ್ದಾರೆ.

ಸತತ ಆರನೇ ಪ್ರಯತ್ನದಲ್ಲಿ ಐಎಎಸ್ ಹುದ್ದೆಗೆ ಆಯ್ಕೆಯಾಗಿರುವ ಭರತ್ ಮೂಲತಃ ರಾಯಚೂರಿನ ಅತ್ಯಂತ ಹಿಂದುಳಿದ ಬೂರ್ದಿಪಾಡ ಗ್ರಾಮದವರೆಂಬುದು ವಿಶೇಷ.
ಇವರ ತಂದೆ ಪ್ರೊ.ಚಂದ್ರಶೇಖರ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಪುತ್ರ ಭರತ್ ಸಿ ಯಂ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಶಿವಮೊಗ್ಗದಲ್ಲಿ ಹಾಗೂ ಬಿಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಪದವಿಯನ್ನು ಸೂರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಪೂರ್ಣಗೋಳಿಸಿದ್ದಾರೆ.

ಇವರುಗಳ ಸಾಧನೆಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅಂಬೇಡ್ಕರ್ ಟ್ರಸ್ಟ್ ರಾಜೀವ್ ಗಾಂಧಿ ಬಿಎಡ್ ಕಾಲೇಜಿನ ಪ್ರಾಂಮಶುಪಾಲರಾದ ಸಿದ್ದರಾಜು, ಹಾಗೂ ಹನುಮಂತಪ್ಪ ಎಸ್, ಸ್ಸಂಶೋಧನಾ ವಿದ್ವಾಂಸರು, ಸಮಾಜಶಾಸ್ತ್ರ ವಿಭಾಗ. ಕುವೆಂಪು ವಿಶ್ವವಿದ್ಯಾಲಯ ಇವರುಗಳು ಶುಭಾಶಯಗಳನ್ನು ತಿಳಿಸಿದ್ದಾರೆ.