ಜಮ್ಮು ಕಾಶ್ಮೀರದ ಪೆಹಲ್ಗಾಮನಲ್ಲಿ ನಡೆದ ಭಯೋತ್ಪಾದನೆ ದಾಳಿಯನ್ನು ಉಗ್ರವಾದ ಖಂಡಿಸಿ ಸಿಪಿಐ(ಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ಧೇಶಿಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ ಮಾತನಾಡಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಗೆ 28 ಜನರು ಹುತಾತ್ಮರಾಗಿದ್ದಾರೆ.ಕ್ರೂರ ಉಗ್ರವಾದಿಗಳು ನಡೆಸಿದ ಹತ್ಯೆಯನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ದಾಳಿಯಲ್ಲಿ ಹುತಾತ್ಮರಾದ ಕುಟುಂಬದ ಜೊತೆ ಅವರ ದುಃಖದಲ್ಲಿ ನಾವಿದ್ದೇವೆ.ಹತ್ಯೆಯಲ್ಲಿ ಮಡಿದವರು ಇತರೆ ಜಾತಿ ಧರ್ಮದ ಜನರೂ ಇರುವರು. ಆದರೆ ಈ ದುಷ್ಕೃತ್ಯವನ್ನು ಒಂದು ಸಮುದಾಯದ ತಲೆಗೆ ಮಾತ್ರ ಕಟ್ಟುವಂತಹ ಕುಟಿಲತೆ ನಡೆಯುತ್ತಿದೆ. ಇದು ಕೋಮು ವಿಚ್ಛಿದ್ರಕಾರ ಉದ್ಧೇಶ ಹೊಂದಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅನ್ಯಜಾತಿ ಯುವಕನೊಂದಿಗೆ ಪ್ರೀತಿ; ಮಗಳ ಹತ್ಯೆ ಮಾಡಿ ನದಿಗೆ ಎಸೆದ ತಂದೆ
ಕೇಂದ್ರ ಸರ್ಕಾರವು ತನ್ನ ಭದ್ರತಾ ಲೋಪವನ್ನು ಮುಚ್ಚಿಕೊಳ್ಳಲು ಹಿಂದೂ ಮುಸ್ಲಿಂ ಮುನ್ನಲೆಗೆ ತಂದು ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅಪಾದಿಸಿದರು.ಕಾಶ್ಮೀರದ ಜನತೆಯು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಎಂದು ಹೇಳಿದರು.
ಕೋಮುದ್ವೇಷ ಹಬ್ಬಿಸುವುದನ್ನು ಸಂಘಪರಿವಾರದ ಜನತೆ ನಿಲ್ಲಿಸಿಲ್ಲ. ಕಾಶ್ಮೀರದಲ್ಲಿ ಸಿಪಿಐಎಂ ಪಕ್ಷದ ಶಾಸಕರಾಗಿರುವ ಕಾ.ಯೂಸೂಫ್ ತಾರಿಗಾಮಿ ಅವರು ನೊಂದವರನ್ನು ಸಂತೈಸುವಲ್ಲಿ, ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಮೂರು ಜನರು ಉಗ್ರಗಾಮಿಗಳಿಗೆ ಬಲಿಯಾದ ಹಿನ್ನೆಲೆ ಅವರು ನೋವು ಹೊಂದಿದ್ದಾರೆ. ಉಗ್ರವಾದ ಭಯೋತ್ಪಾದನೆಯ ವಿರುದ್ಧ ನಿರಂತರ ಹೋರಾಟವನ್ನು ಪಕ್ಷ ನಡೆಸಲಿದೆ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ತಾಲ್ಲೂಕ ಕಾರ್ಯದರ್ಶಿ ಹೆಚ್.ಪದ್ಮಾ, ಡಿ.ಎಸ್.ಶರಣಬಸವ ಸೇರಿದಂತೆ ಅನೇಕರಿದ್ದರು.