ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಆವೃತ್ತಿಯ 48ನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ರಿಂಕು ಸಿಂಗ್ ನಡುವೆ ಅನಿರೀಕ್ಷಿತ ಘಟನೆ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕೆಕೆಆರ್ ಆಟಗಾರ ರಿಂಕು ಸಿಂಗ್‌ಗೆ ಕಪಾಳಮೋಕ್ಷ ಮಾಡಿದ್ದು, ಈ ದೃಶ್ಯ ಎಲ್ಲಡೆ ವೈರಲ್ ಆಗಿದೆ.
ಪಂದ್ಯ ಮುಕ್ತಾಯವಾದ ನಂತರ ರಿಂಕು ಮಾತನಾಡುತ್ತಿರುವ ಸಂದರ್ಭದಲ್ಲಿ ಮೊದಲಿಗೆ ಕುಲದೀಪ್ ಕಪಾಳ ಮೋಕ್ಷ ಮಾಡಿದ್ದಾರೆ. ಹಾಗೆಯೇ ಮತ್ತೆ ಏನೋ ಹೇಳಲು ಹೋದಾಗ ಎರಡನೇ ಬಾರಿಯೂ ಕುಲದೀಪ್ ಹಲ್ಲೆ ಮಾಡಿದ್ದಾರೆ. ಆದರೆ ಕುಲದೀಪ್ ಯಾದವ್ ಏಕೆ ಹೊಡೆದರು ಎಂಬುದು ತಿಳಿದಿಲ್ಲ. ಈ ಘಟನೆ ಇಬ್ಬರ ನಡುವೆ ತಮಾಷೆಯಾಗಿ ನಡೆಯಿತೋ ಅಥವಾ ಗಂಭೀರವಾಗಿ ನಡೆಯಿತೋ ಎಂಬ ಮಾಹಿತಿಗೆ ಉತ್ತರ ದೊರಕಿಲ್ಲ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಇದು ನನ್ನ ಮೈದಾನ: ಗೆದ್ದ ನಂತರ ಕೆ ಎಲ್ ರಾಹುಲ್‌ಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!
ಈ ಮಧ್ಯೆ, ಕುಲದೀಪ್ ಬೌಲಿಂಗ್‌ನಲ್ಲಿ ರಿಂಕು ಸಿಂಗ್ 22 ರನ್ ಗಳಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಲು ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯ ಘಟನೆ ಎಂದು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಕುಲದೀಪ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಆಟಗಾರರು ಕಪಾಳಮೋಕ್ಷ ಮಾಡಿಕೊಳ್ಳುವುದು ಇದೇ ಮೊದಲ ಘಟನೆಯೇನು ಅಲ್ಲ. ಈ ಹಿಂದೆ ಮುಂಬೈ ಇಂಡಿಯನ್ಸ್ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಪಂಜಾಬ್ ಕಿಂಗ್ಸ್ ಮಾಜಿ ಆಟಗಾರ ಎಸ್ ಶ್ರೀಶಾಂತ್ ಅವರಿಗೆ ಮೈದಾನದಲ್ಲೇ ಕಪಾಳಕ್ಕೆ ಬಾರಿಸಿ ಸುದ್ದಿಯಾಗಿದ್ದರು. ಶ್ರೀಶಾಂತ್ ಕಣ್ಣೀರಿಡುತ್ತಾ ಸಾಗುತ್ತಿದ್ದ ದೃಶ್ಯಗಳು ಎಲ್ಲಡೆ ಹರಿದಾಡಿತ್ತು. ಈ ಘಟನೆಯ ವಿರುದ್ಧ ಬಿಸಿಸಿಐ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹರ್ಭಜನ್ ಸಿಂಗ್ ಅವರಿಗೆ 11 ಪಂದ್ಯಗಳಿಗೆ ನಿಷೇಧ ವಿಧಿಸಿತ್ತು. ಆ ಬಳಿಕ ಹರ್ಭಜನ್ ಸಿಂಗ್ ತಮ್ಮ ತಪ್ಪನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದರು.
Seeing the expression on Rinku's face, it becomes clear that #kuldeepyadav did not slap Rinku just for fun, but he slapped #RinkuSingh intentionally.#DCvsKKR #KKRvsDC pic.twitter.com/wtBhdSMqgg
— Saif Ali Khan (@saifalikhan067) April 30, 2025