ಜಪಾನ್ನ ಐಚಿ ಮತ್ತು ನಗೋಯಾದಲ್ಲಿ ಸೆ.19 ರಿಂದ ಅ.4ರ ವರೆಗೆ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಈ ಬಾರಿ ಕ್ರಿಕೆಟ್ಗೆ ಸ್ಥಾನ ನೀಡಲಾಗಿದೆ. ಏಷ್ಯನ್ ಕ್ರೀಡಾಕೂಟದ ಮಂಡಳಿ AINAGOC ಕ್ರಿಕೆಟ್ ಮತ್ತು ಮಿಕ್ಸ್ ಮಾರ್ಷಲ್ ಆರ್ಟ್ಸ್ ಅನ್ನು ಅಧಿಕೃತವಾಗಿ ಸೇರಿಸಿಕೊಂಡಿದೆ.
ಇದರ ಜೊತೆಗೆ ಕುರಾಶ್ ಮತ್ತು ಜುಜಿಟ್ಸು ಜೊತೆಗೆ ಆರು ಸ್ಪರ್ಧೆಗಳು ಕಾಂಬ್ಯಾಟ್ ಸ್ಪೋರ್ಟ್ಸ್ ಅಡಿಯಲ್ಲಿ ನಡೆಯಲಿವೆ. ಸೆ.19 ರಿಂದ ಅಕ್ಟೋಬರ್ 4 ರವರೆಗೆ ಐಚಿ ಮತ್ತು ನಗೋಯಾ ಪ್ರಾಂತ್ಯಗಳಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯಲಿವೆ. 41 ಕ್ರೀಡೆಗಳು ಮತ್ತು 45 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಂದ 15,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಕ್ರಿಕೆಟ್ ಪಂದ್ಯಗಳು ಐಚಿ ಪ್ರಾಂತ್ಯದಲ್ಲಿ ನಡೆಯಲಿವೆ. T20 ಮಾದರಿಯ ಕ್ರಿಕೆಟ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಸೇರ್ಪಡೆಯಾಗಲಿರುವುದರಿಂದ ಈ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. 1900ರಲ್ಲಿ ಪ್ಯಾರಿಸ್ನಲ್ಲಿ ಗ್ರೇಟ್ ಬ್ರಿಟನ್ ಫ್ರಾನ್ಸ್ ಅನ್ನು ಸೋಲಿಸಿದ ನಂತರ ಕ್ರಿಕೆಟ್ ಮತ್ತೆ ಒಲಿಂಪಿಕ್ಸ್ನಲ್ಲಿ ಕಾಣಿಸಿಕೊಳ್ಳಲಿದೆ.
ಇದನ್ನು ಓದಿದ್ದೀರಾ? ಐಪಿಎಲ್ 2025 | ಇದು ನನ್ನ ಮೈದಾನ: ಗೆದ್ದ ನಂತರ ಕೆ ಎಲ್ ರಾಹುಲ್ಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!
ದಕ್ಷಿಣ ಏಷ್ಯಾದ ತಂಡಗಳು ಈ ಹಿಂದೆ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿವೆ. ಬಾಂಗ್ಲಾದೇಶ 2010ರಲ್ಲಿ ಪುರುಷರ ಚಿನ್ನದ ಪದಕ ಗೆದ್ದುಕೊಂಡಿತು.ಶ್ರೀಲಂಕಾ 2014ರಲ್ಲಿ ಮತ್ತು ಭಾರತ 2022ರಲ್ಲಿ ಚಿನ್ನದ ಪದಕ ಗೆದ್ದವು. ಭಾರತ ತಂಡದಲ್ಲಿ ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಟಿ20 ಸ್ಟಾರ್ ಆಟಗಾರರು ಇದ್ದರು. ಅಫ್ಘಾನಿಸ್ತಾನ ಮೂರು ಆವೃತ್ತಿಗಳಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿದೆ. ಭಾರತ 2022ರಲ್ಲಿ ಮಹಿಳಾ ಕ್ರಿಕೆಟ್ನಲ್ಲಿ ಚಿನ್ನ ಗೆದ್ದರೆ, ಪಾಕಿಸ್ತಾನ 2010 ಮತ್ತು 2014ರಲ್ಲಿ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿತು.
ಮೇ 1ರಂದು ಒಸಿಎ ಸಮನ್ವಯ ಸಮಿತಿಯ ಮೂರನೇ ಸಭೆ ಆರಂಭವಾಗಲಿದೆ. ಇದರಲ್ಲಿ AINAGOCಯ 18 ವಿಭಾಗಗಳು ಕ್ರೀಡೆ, ವಸತಿ, ಸಾರಿಗೆ, ಮಾನ್ಯತೆ, ಮಾರುಕಟ್ಟೆ, ಟಿಕೆಟಿಂಗ್ ಮತ್ತು ಐಟಿ ಸೇವೆಗಳಂತಹ ವಿಷಯಗಳ ಬಗ್ಗೆ ಪ್ರಸ್ತುತಿ ನೀಡಲಿವೆ. ಜೊತೆಗೆ ಸಮನ್ವಯ ಸಮಿತಿ ಸಭೆಯಲ್ಲಿ ಎರಡು ಪ್ರಾಯೋಜಕತ್ವ ಸಹಿ ಸಮಾರಂಭಗಳು ನಡೆಯಲಿವೆ.