ಜಾತಿಗಣತಿಗೆ ಒಪ್ಪಿಗೆ: ಜಾತಿಗಣತಿ‌ ಕೇಳುವವರು ‘ಅರ್ಬನ್ ನಕ್ಸಲರು’ ಎಂದಿದ್ದ ಮೋದಿ; ಹಳೆಯ ವಿಡಿಯೋ ವೈರಲ್

Date:

Advertisements

ಮುಂದಿನ ಜನಗಣತಿ ಜೊತೆಯಲ್ಲೇ ಜಾತಿಗಣತಿಯೂ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ, ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ನಡೆಸಲು ನಿರ್ಧರಿಸಿದೆ. ಈ ಬೆನ್ನಲ್ಲೇ, ಮೋದಿ ಅವರು ‘ಜಾತಿಗಣತಿ ಕೇಳುವವರು ಅರ್ಬನ್ ನಕ್ಸಲರು’ ಎಂದಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮೋದಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಾತಿಗಣತಿ ನಡೆಸುವುದು ತಮ್ಮ ಪ್ರಧಾನ ಆದ್ಯತೆ ಎಂದು ಭರವಸೆ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಗೆ ಕಾಂಗ್ರೆಸ್ ಪ್ರಸ್ತಾಪಗಳನ್ನು ರೂಪಿಸಿದ್ದು ವೈಯಕ್ತಿಕ ಆಸ್ತಿಯ ಹಕ್ಕಿಗೆ ಬೆದರಿಕೆಯಾಗಿರುವ, ಮಾವೋವಾದಿ ಸಿದ್ಧಾಂತವನ್ನು ಪ್ರತಿಧ್ವನಿಸುವ ಅರ್ಬನ್ ನಕ್ಸಲರು” ಎಂದು ಹೇಳಿದ್ದರು.

“ಜಾತಿಗಣತಿ ಮತ್ತು ಸಂಪತ್ತು ಮರುಹಂಚಿಕೆ ಪರಿಕಲ್ಪನೆಯು ‘ಪ್ರತಿ ಮನೆಯ ಮೇಲಿನ ದಾಳಿ’. ಯಾವುದೇ ಮಹಿಳೆ ಪಾತ್ರೆಗಳಲ್ಲಿ ಚಿನ್ನವನ್ನು ಕೂಡಿಟ್ಟಿದ್ದರೆ, ಅದನ್ನು ಕಂಡುಹಿಡಿದು ಮರುಹಂಚಿಕೆ ಮಾಡಬೇಕು ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ನೀತಿಗಳಲ್ಲಿ ಮಾವೋವಾದಿ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ” ಎಂದು ಮೋದಿ‌ ಹೇಳಿದ್ದರು.

Advertisements

ಈಗ ಮೋದಿ ಸರ್ಕಾರವೇ ಜಾತಿಗಣತಿ‌ ನಡೆಸಲು ನಿರ್ಧರಿಸಿದೆ. ಜಾತಿಗಣತಿ ನಡೆಯಬೇಕು ಅನ್ನುವವರು‌ ಅರ್ಬನ್ ನಕ್ಸಲರು ಎಂದಿದ್ದ ಮೋದಿ ಅವರ ಸರ್ಕಾರವೇ ಜಾತಿಗಣತಿ ನಡೆಸಲು ಮುಂದಾಗಿದೆ. ಜಾತಿಗಣತಿಗೆ ಹೆಚ್ಚು ಒತ್ತಾಯ ಕೇಳಿಬಂದಿದ್ದ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಜಾತಿಗಣತಿಯ ಬಗ್ಗೆ ಚರ್ಚಿಸಿ, ನಿರ್ಧರಿಸಿದೆ ಎಂದೂ ಹೇಳಲಾಗುತ್ತಿದೆ.

ಅಂದಹಾಗೆ ಈಗ ಮೋದಿ ಅವರು ಯಾವ ಅರ್ಬನ್ ನಕ್ಸಲರ ಪ್ರಭಾವಕ್ಕೆ ಒಳಗಾಗಿ ಜಾತಿಗಣತಿ ನಡೆಸಲು ಮುಂದಾಗಿದ್ದಾರೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಮೋಶಾ ಇಬ್ಬರೂ ಮೊದಲೇ ಜುಮ್ಲಾ ವ್ಯಾಪಾರಿಗಳು,, ಅಧಿಕಾರಕ್ಕೆ ಏನು ಬೇಕಾದರೂ ವ್ಯಾಪಾರ ಮಾಡುವರು,, ಮಾನಗೆಟ್ಟು ಟ್ರೋಲ್ ಆದರೂ ಜಾತಿಗಣತಿಗೆ ಮುಂದಾಗಿದ್ದು ನೋಡಿದ್ರೆ ಏನೋ ಕುತಂತ್ರ ರೂಪಿಸುತ್ತಿದಬಹು ನಂಬಿಕೆ ಅರ್ಹರಲ್ಲ

  2. ಮೊದಲಿಗೆ ಅರ್ಬನ್ ನಕ್ಸಲ್ ಪಡೆಗೆ ಮೋದಿಗೆ ಸ್ವಾಗತ. ಮಂಡಲ್ ವರದಿ ಪ್ರಕಟವಾದಾಗ ನಡೆದ ಪ್ರತಿಭಟನೆ, ಆತ್ಮಾಹುತಿ ಇದೆಲ್ಲಾ ನೋಡಿದಾಗ, ಈ ಜಾತಿಗಣತಿಗೂ ಅದೇ ರೀತಿ ಹಿಂಸಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದಾರೇನೋ ಅನಿಸುತ್ತೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X