ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಬ್ಬ ಹೆಂಡತಿಯ ಮೇಲೆ ಗಂಭೀರವಾಗಿ ಹಲ್ಲೆ ನೆಲೆಸಿರುವ ಘಟನೆ ನಡೆದಿದೆ. ಅಲ್ಲದೇ ಪತಿ ಎರಡನೇ ವಿವಾಹವಾಗಿದ್ದಾನೆ ಎನ್ನುವ ಆರೋಪ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಂದಲಹಟ್ಟಿ ಗ್ರಾಮದಲ್ಲಿ ಕೇಳಿಬಂದಿದೆ.
ಗಂಡು ಮಗುವಿನ ವ್ಯಾಮೋಹಕ್ಕೆ ಬಿದ್ದ ಪತಿಯೊಬ್ಬ ಹೆಂಡತಿಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಲ್ಲದೇ, ಮೂರು ಬಾರಿ ಲಿಂಗ ಪತ್ತೆ ಪರೀಕ್ಷೆ ನಡೆಸಿ ಗರ್ಭಪಾತ ಮಾಡಿಸಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನೆಡೆದಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಳ್ಳಕೆರೆ ತಾಲೂಕಿನ ಮಂದಲಹಟ್ಟಿ ಗ್ರಾಮದ ಕಾಟಮಲಿಂಗಯ್ಯ ಎನ್ನುವ ವ್ಯಕ್ತಿಯೇ ಆರೋಪಿಯಾಗಿದ್ದು, ಈತನ ವಿರುದ್ಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತ್ನಿ ಶಾಂತಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಟಮಲಿಂಗಯ್ಯ ಹಂಪಿ ಕನ್ನಡ ವಿವಿಯ ಪಿಎಚ್‌ಡಿ ಪದವಿ ಪಡೆದಿರುವ ಪದವೀಧರನಾಗಿದ್ದು, ದೇವರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಾಕಿಸ್ತಾನಿ ಮಹಿಳೆಯ ಅಧ್ಯಯನ ವೀಸಾ, ಭಾರತ ಬಿಡುವ ಅಗತ್ಯವಿಲ್ಲ; ಎಸ್ಸಿ ಉಮಾ ಪ್ರಶಾಂತ್.
ಎಂಟು ವರ್ಷದ ಹಿಂದೆ ಮದುವೆಯಾಗಿದ್ದ ಕಾಟಮಲಿಂಗಯ್ಯ ಹಾಗೂ ಶಾಂತಮ್ಮ ದಂಪತಿಗಳಿಗೆ ಎರಡು ಹೆಣ್ಣುಮಕ್ಕಳಿವೆ. ಗಂಡು ಮಗು ಹುಟ್ಟಲಿಲ್ಲ ಎಂದು ಆಗಾಗ್ಗೆ ಇದೇ ವಿಷಯಕ್ಕೆ ಪೀಡಿಸುತ್ತಿದ್ದು, ಹೆಂಡತಿಯ ಮೇಲೆ ಹಲ್ಲೆಯನ್ನೂ ನಡೆಸುತ್ತಿದ್ದ.
ವಿದ್ಯಾವಂತನಾಗಿದ್ದು, ಪದವೀಧರನಾದರೂ ಹೆಂಡತಿಗೆ ಗಂಡು ಮಗು ಬೇಕೆಂದು ಸತತ ಹಲ್ಲೆ ನಡೆಸಿದ್ದಲ್ಲದೇ, ಗೌರಮ್ಮ ಎಂಬ ಯುವತಿಯನ್ನು ಎರಡನೇ ವಿವಾಹವಾಗಿದ್ದಾನೆಂದು ಆರೋಪಿಸಲಾಗಿದೆ.
ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಕಾಟಮಲಿಂಗಯ್ಯನ ವಿಚಾರಣೆ ನಡೆಸಿದ್ದಾರೆ.