- ಇಬ್ಬರೂ ಜೊತೆಗಿರುವ ಫೋಟೋ ವೈರಲ್ ಮಾಡುತ್ತೇನೆಂದು ಆಶಾಗೆ ಬೆದರಿಕೆ ಹಾಕಿದ ಪ್ರಿಯಕರ
- ಮಗಳ ಸಾವು ನೋವಿನ ಮಧ್ಯೆ ಆಶಾ ಕಣ್ಣುಗಳನ್ನು ಇಬ್ಬರಿಗೆ ದಾನ ಮಾಡಿದ ಕುಟುಂಬಸ್ಥರು
ಮನನೊಂದು ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ.
ಆಶಾ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನವರು. ಬಾಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ನೆಲೆಸಿದ್ದರು.
ಮೃತ ಯುವತಿ ಆಶಾ ಕಲಿಕೆಯ ಜತೆಗೆ ನಗರದ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಐದು ವರ್ಷಗಳಿಂದ ಅವಿನಾಶ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದ ಪೋಷಕರು, ಆಕೆಗೆ ಬುದ್ಧಿವಾದ ಹೇಳಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಿಯಕರ ಅವಿನಾಶ್ ಜೊತೆ ಆಶಾ ಚರ್ಚಿಸಿದ್ದು, ದೂರವಾಗುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಿಂದ ಕೋಪಗೊಂಡ ಅವಿನಾಶ್ ನನಗೆ ಮೋಸ ಮಾಡಿದ್ದೀಯಾ, ಪ್ರೀತಿ ಮಾಡೋಕು ಮೊದಲೇ ಈ ಬಗ್ಗೆ ಯೋಚನೆ ಮಾಡಬೇಕಿತ್ತು. ಇಬ್ಬರೂ ಜೊತೆಗಿರುವ ಫೋಟೋ ವೈರಲ್ ಮಾಡುತ್ತೇನೆ ಎಂದು ಆಶಾಗೆ ಬೆದರಿಕೆ ಹಾಕಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯತಮೆ ಕೊಲೆ ಮಾಡಿ ತಿಂಗಳು ಕಾಲ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಪ್ರೀತಿ ವಿಚಾರವಾಗಿ ಮನನೊಂದು ಆಶಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನ ನೋವಿನ ನಡುವೆ ಆಕೆಯ ಕಣ್ಣುಗಳನ್ನು ಕುಟುಂಬಸ್ಥರು ಇಬ್ಬರಿಗೆ ದಾನ ಮಾಡಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅವಿನಾಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಾವಿಗೆ ಕಾರಣ ಏನೆಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.