ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಪ್ರಾರಂಭವಾಗುವ ಜಾತಿ ಗಣತಿಯಲ್ಲಿ ಮಾದಿಗ ಸಮೂದಾಯ ಜನರು ಬೇರೆ ಬೇರೆ ಹೆಸರುಗಳನ್ನು ನಮೂದಿಸಿದೇ ಮಾದಿಗ ಎಂದು ಕಲಂ 61 ರಲ್ಲಿ ನಮೂದಿಸಬೇಕೆಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮನವಿ ಮಾಡಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ನಡೆಸಿದ ಹೋರಾಟ ಫಲವಾಗಿ ಒಳಮೀಸಲು ಜಾತಿ ಸಮೀಕ್ಷೆಗೆ ಸುಪ್ರಿಂಕೋರ್ಟ ತೀರ್ಪಿನ ಮೇರೆಗೆ ರಾಜ್ಯ ಸರ್ಕಾರ ಮುಂದಾಗಿದೆ. ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಏಕ ಸದಸ್ಯ ಆಯೋಗದಿಂದ ಜಾತಿ ಸಮೀಕ್ಷೆ ಮೇ5 ರಿಂದ 17 ವರೆಗೆ ನಡೆಯಲಿದೆ ಎಂದರು.
ಸಮಾಜದ ಬಾಂಧವರು ಆದಿ ದ್ರಾವಿಡ, ಆದಿ ಕರ್ನಾಟಕ, ಹರಿಜನ ,ಎಸ್ಸಿ ಎಂದೆಲ್ಲ ಬರೆಸದೆ ಮಾದಿಗ ಎಂದು ನಮೂದಿಸಬೇಕು. ಮನೆ ಮನೆಗೆ ಬರುವ ಗಣತಿದಾರರಿಗೆ ಸಮಾಜದ ವಿದ್ಯಾರ್ಥಿಗಳು, ವಿದ್ಯಾವಂತರು ಸರಿಯಾದ ಮಾಹಿತಿ ದಾಖಲಿಸಲು ಸಹಕರಿಸಬೇಕು.ಈಗಾಗಲೇ ಸಮಿತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಗಣತಿ ನಡೆಯುವವರಗೆ ಗ್ರಾಮಗಳಲ್ಲಿಯೇ ಇದ್ದು ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪತಿ ಮಲಗಿದಾಗ ಕತ್ತು ಕಿಸುಕಿ ಕೊಲೆ; ಪತ್ನಿಗೆ ಜೀವಾವಧಿ ಶಿಕ್ಷೆ
ಮಾದಿಗ ದಂಡೋರ ಮುಖಂಡ ದುಳ್ಳಯ್ಯ ಗುಂಜಳ್ಳಿ ಮಾತನಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು ಮಾದಿಗ ಎಂದು ನಮೂದಿಸಬಾರದು. ಮಾದಿಗ ಸಮಾಜದವರು ಮಾದಿಗ ಎಂದು ನಮೂದಿಸಲು ಜನರಿಗೆ ತಿಳುವಳಿಕೆ ನೀಡಲಾಗುತ್ತದೆ ಎಂದರು.
ಈ ಸಂರ್ಬದಲ್ಲಿ ರಂಜೀತ ದಂಡೋರ, ಸುರೇಶ ದುಗನೂರು, ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತಿç, ಗೋವಿಂದ ಇಟೇಕರ್, ಜಕ್ರಪ್ಪ ಹಂಚಿನಾಳ, ನರಸಿಂಹಲು ಗಾಜರಾಳ, ಅನಿಲಕುಮಾರ, ಸಲ್ಮಾನ ಮರ್ಚಟ್ಹಾಳ, ರಾಜಪ್ಪ, ದಾವಿದ್ ಸೇರಿ ಅನೇಕರಿದ್ದರು.
