ಕುಮಾರಣ್ಣ, ಪದೇ ಪದೇ ಯಾಕೆ ನನ್ನ ಹಾಸನದ ಶಾಸಕ ಅಂತ ಕರೀತೀರಾ, ನಂಗೆ ಹೆಸರಿಲ್ವಾ?: ಶಿವಲಿಂಗೇಗೌಡ

Date:

Advertisements
  • ‘ಯಾಕಣ್ಣಾ ನಾವು ನಿಮಗೆ ಕುಮಾರಣ್ಣಾ ಅಂತ ಗೌರವ ಕೊಟ್ಟು ಮಾತನಾಡಲ್ವೇ?’
  • ಕೊನೆಗೆ ಕುಮಾರಸ್ವಾಮಿ ಬಾಯಲ್ಲಿ ತಮ್ಮ ಹೆಸರು ಹೇಳಿಸಿಕೊಂಡ ಶಿವಲಿಂಗೇಗೌಡ

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಅವರ ನಡುವಿನ ಆತ್ಮೀಯತೆಯಲ್ಲಿ ಎಷ್ಟು ಬಿರುಕು ಬಿಟ್ಟಿದೆ ಎಂಬುದಕ್ಕೆ ಇಂದಿನ ಸದನ ಸಾಕ್ಷಿಯಾಯಿತು.

ಒಂದು ಕಾಲದಲ್ಲಿ ಎಚ್‌ ಡಿ ಕುಮಾರಸ್ವಾಮಿ ಜೊತೆಗೆ ಹೆಚ್ಚು ಆಪ್ತರಾಗಿ ಗುರುತಿಸಿಕೊಂಡಿದ್ದ ಕೆ ಎಂ ಶಿವಲಿಂಗೇಗೌಡರು 2023ರ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಗೆದ್ದು ಮತ್ತೆ ವಿಧಾನಸಭೆ ಪ್ರವೇಶಿಸಿರುವ ಶಿವಲಿಂಗೇಗೌಡ ಮೇಲೆ ಕುಮಾರಸ್ವಾಮಿ ಅವರಿಗೆ ಮುನಿಸು ಕಡಿಮೆಯಾದಂತೆ ಕಾಣುತ್ತಿಲ್ಲ.

ಶಿವಲಿಂಗೇಗೌಡರ ಮೇಲಿನ ಮುನಿಸು ಸದನದೊಳಗೆ ಕುಮಾರಸ್ವಾಮಿ ಅವರ ಮಾತಲ್ಲೂ ಅದು ಧ್ವನಿಸಿತು. ಕೊಬ್ಬರಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಜೆಡಿಎಸ್‌ ಮಂಗಳವಾರ ನಿಲುವಳಿ ಸೂಚನೆ ಮಂಡಿಸಿತ್ತು. ಸಭಾಧ್ಯಕ್ಷ ಯು ಟಿ ಖಾದರ್‌ ಆ ನಿಲುವಳಿಯನ್ನು 69ಕ್ಕೆ ಕನ್ವರ್ಟ್‌ ಮಾಡಿ ಇಂದು ಮಧ್ಯಾಹ್ನದ ಕಲಾಪದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

Advertisements

ಕುಮಾರಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ ತಮ್ಮ ಮಾತಿನ ಮಧ್ಯೆ, “ಪಾಪ, ಹಾಸನದ ಶಾಸಕರೊಬ್ಬರು ನಿನ್ನೆ ಈ ಬಗ್ಗೆ ಹೇಳುತ್ತಿದ್ದರು” ಎನ್ನುತ್ತಿದ್ದಂತೆ ಶಿವಲಿಂಗೇಗೌಡರು ಮಧ್ಯ ಪ್ರವೇಶಿಸಿ, “ಯಾಕಣ್ಣಾ ನಾವು ನಿಮಗೆ ಗೌರವ ಕೊಟ್ಟು ಮಾತನಾಡುವುದಿಲ್ಲವೇ? ನಿನ್ನೆ ಕೂಡ ಮಾಧ್ಯಮಗಳ ಮುಂದೆ ಹಾಸನ ಶಾಸಕರು ಎಂದು ಕರೆದಿದ್ದೀರಿ. ಯಾಕೆ ನಮಗೆ ಹೆಸರು ಇಲ್ಲವಾ? ನಾವು ಬಡವರ ಮಕ್ಕಳು. ಹೇಗೆಗೋ ಬೆಳೆದು ಬಂದಿದ್ದೀವಿ. ರೈತನ ಮಗನಾಗಿ ಬಂದಿರುವೆ ಹೆಸರು ಹಿಡಿದು ಕರೆಯಿರಿ” ಎಂದು ವಿನಂತಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು

ಮುಂದುವರಿದು, “ಭೂಮಿ ಮೇಲೆ ಹೆಸರು ಇಲ್ಲದೇ ಬಂದಿಲ್ಲ. ನನ್ನ ಹೆಸರು ಶಿವಲಿಂಗೇಗೌಡ ಅಂತ. ನಿಮಗೆ 10 ಲಕ್ಷ ಜನ ಫಾಲೋವರ್ಸ್‌ ಇರಬಹುದು. ನನಗೂ ಎರಡು ಲಕ್ಷ ಜನ ಇದ್ದಾರೆ. ನನ್ನ ಹತ್ರ ಸೆಲ್ಫಿ ತೆಗೆಸಿಕೊಂಡವರೇ ಐದು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಯಾಕೆ ನನಗೆ ಹಾಸನ ಶಾಸಕ ಎಂದು ಕರೀತೀರಿ. ವಿಶ್ವಾಸ ಇತ್ತು ಅಷ್ಟು ದಿನ ನಿಮ್ಮ ಜೊತೆ ಇದ್ದೆ. ವಿಶ್ವಾಸ ಇಲ್ಲದ ಮೇಲೆ ನಾನು ಈ ಕಡೆ ಬಂದೆ. ನಿಮ್ಮನ್ನು ಎರಡು ಬಾರಿ ವಿಶಾಲವಾಗಿ ನಾವು ಮುಖ್ಯಮಂತ್ರಿ ಮಾಡಲಿಲ್ಲವೇ? ನಿಮಗೆ ನಾವು ಸಹಾಯ ಮಾಡಿಲ್ಲವೇ? ಪದೇ ಪದೇ ಹಾಸನ ಶಾಸಕ ಎಂದು ಯಾಕೆ ಕರೆಯುತ್ತೀರಿ? ನಾವು ನಿಮಗೆ ಎಂದಾದರೂ ಏಕವಚನದಲ್ಲಿ ಮಾತನಾಡಿಸ್ತೀವಾ?” ಎಂದು ಹಾಸ್ಯವಾಗಿಯೇ ಮಾತನಾಡಿದರು.

ಕೊನೆಗೆ ಕುಮಾರಸ್ವಾಮಿ “ನೋಡ್ರೀ ಶಿವಲಿಂಗೇಗೌಡರೇ..” ಎಂದು ಮಾತು ಆರಂಭಿಸಿದರು. ಆ ಬಳಿಕ ಶಿವಲಿಂಗೇಗೌಡರು ತಮ್ಮ ಆಸನದಲ್ಲಿ ಕುಳಿತುಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X