ಒಡಿಶಾ | ಎಂಟು ತಿಂಗಳ ಹೆಣ್ಣು ಮಗುವನ್ನು 800 ರೂಪಾಯಿಗೆ ಮಾರಿದ ತಾಯಿ

Date:

Advertisements

ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದ ಕಾರಣಕ್ಕೆ ಬುಡಕಟ್ಟು ಮಹಿಳೆಯೊಬ್ಬರು ಆ ಮಗುವನ್ನು 800 ರೂಪಾಯಿಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.

ಮಗುವನ್ನು ಮಾರಾಟ ಮಾಡಿದ ಮಹಿಳೆ ಬುಡಕಟ್ಟು ಪಂಗಡಕ್ಕೆ ಸೇರಿದ್ದು, ಆಕೆಯ ಹೆಸರು ಕರಮಿ ಮುರ್ಮು ಎಂದು ಪೊಲೀಸರು ತಿಳಿಸಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಖುಂಟಾ ಎಂಬಲ್ಲಿ ಘಟನೆ ನಡೆದಿದೆ.

ಕರಮಿ ಮುರ್ಮುಗೆ ಮೊದಲೇ ಒಂದು ಹೆಣ್ಣು ಮಗು ಜನಿಸಿತ್ತು. ಎರಡನೇ ಮಗು ಗಂಡಾಗಬಹುದು ಎಂದು ಆಕೆ ಅಪೇಕ್ಷಿಸಿದ್ದರು. ಆದರೆ, ಎರಡನೇ ಮಗು ಹೆಣ್ಣಾಗಿದ್ದರಿಂದ ಆಕೆ ತೀರಾ ಬೇಸರ ಮಾಡಿಕೊಂಡಿದ್ದರು. ತೀರಾ ಬಡವಿಯಾದ ತಾನು ಆ ಮಗುವನ್ನು ಬೆಳೆಸುವುದು ಹೇಗೆ ಎಂದು ತಮ್ಮ ನೆರೆಯ ಮಹಿಳೆ ಮಹಿ ಮುರ್ಮು ಎನ್ನುವವರ ಜೊತೆ ಆಕೆ ಹೇಳಿಕೊಂಡಿದ್ದರಂತೆ.

Advertisements

ಆಗ ಮಹಿ ಮುರ್ಮು ಮಗುವನ್ನು ಮಾರಾಟ ಮಾಡಲು ನೆರವಾಗುವುದಾಗಿ ಆಶ್ವಾಸನೆ ನೀಡಿದ್ದಾರೆ. ಇಬ್ಬರೂ ಸೇರಿ ಬಿಪ್ರಾಚರಣ್‌ಪುರ್ ಗ್ರಾಮದ ಫುಲಮಣಿ ಮತ್ತು ಅಖಿಲ್ ಮರಾಂಡಿ ಎನ್ನುವ ದಂಪತಿಗೆ ಎಂಟು ತಿಂಗಳ ಮಗುವನ್ನು 800 ರೂಪಾಯಿಗೆ ಮಾರಿದ್ದಾರೆ.

ಮಗುವನ್ನು ಎತ್ತಿಕೊಂಡು ಸಂತೆಗೆ ಹೋಗಿದ್ದ ಕರಮಿ ಮುರ್ಮು ಬರಿಗೈಯಲ್ಲಿ ವಾಪಸ್ಸಾಗಿದ್ದನ್ನು ಕಂಡ ಅಕ್ಕಪಕ್ಕದವರು ಅದರ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ಆಕೆ ಮಗು ಸತ್ತು ಹೋಯಿತೆಂದು ಉತ್ತರಿಸಿದ್ದಾರೆ. ಆಗಲೇ ಹಲವರಿಗೆ ಅನುಮಾನ ಉಂಟಾಗಿದೆ.

ಕರಮಿ ಮುರ್ಮು ಅವರ ಗಂಡ ಮುಸು ಮರ್ಮು ತಮಿಳುನಾಡಿನಲ್ಲಿದ್ದು, ದಿನಗೂಲಿ ಕೆಲಸ ಮಾಡುತ್ತಾರೆ. ಒಮ್ಮೆ ರಜೆ ಪಡೆದು ಮನೆಗೆ ಬಂದ ಆತ ತನ್ನ ಎರಡನೇ ಮಗಳ ಬಗ್ಗೆ ವಿಚಾರಿಸಿದ್ದಾರೆ. ಆ ಮಗು ಸತ್ತುಹೋಯಿತು ಎಂದು ಹೆಂಡತಿ ಉತ್ತರಿಸಿದ್ದಾಳೆ. ಆದರೆ, ನೆರೆಹೊರೆಯವರು ಆತನಿಗೆ ಸತ್ಯಸಂಗತಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು

ಆಗ ಆತ ಹತ್ತಿರದ ಖುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣವೇ ಗ್ರಾಮಕ್ಕೆ ಧಾವಿಸಿದ ಪೊಲೀಸರು ಕರಮಿ ಮುರ್ಮು ಅವರನ್ನು ತನಿಖೆ ಮಾಡಿದಾಗ ಮಗು ಮಾರಿದ ಸಂಗತಿ ಖಚಿತವಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಗುವನ್ನು ವಾಪಸ್ ಪಡೆದು ಶಿಶು ಪೋಷಣಾ ಕೇಂದ್ರಕ್ಕೆ ಕಳಿಸಿದ್ದಾರೆ.

ಮಗುವಿನ ತಾಯಿಯೂ ಸೇರಿದಂತೆ ಪಾಲ್ಗೊಂಡವರ ವಿರುದ್ಧ ಐಪಿಸಿ 370 (ಮಾನವ ಕಳ್ಳಸಾಗಣೆ) ಅಡಿ ಪ್ರಕರಣ ದಾಖಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರದುರ್ಗ ನಗರದ ಹೊರವಲಯದ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X