ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಏಕತೆಯನ್ನು ನಿರ್ಮಿಸಬೇಕು, ಯಾವುದೇ ಹಾನಿಯಾಗದಂತೆ ತಪ್ಪಿಸಬೇಕು ಎಂದು ಪಹಲ್ಗಾಮ್ ದಾಳಿಯ ಬಗ್ಗೆ ಸಿಪಿಐಎಂ ಭಾನುವಾರ ಹೇಳಿದೆ. ಭಯೋತ್ಪಾದಕರು ಇದ್ದರೆಂಬ ಕಾರಣಕ್ಕೆ ಮನೆಯನ್ನೇ ಕೆಡವುದರಿಂದ ಮುಗ್ಧ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸಿಪಿಐಎಂ ಒತ್ತಾಯಿಸಿದೆ.
ಹೊಸದಾಗಿ ಆಯ್ಕೆಯಾದ ಪೊಲಿಟ್ ಬ್ಯೂರೋದ ಮೊದಲ ಸಭೆಯ ನಂತರ ಸಿಪಿಐಎಂ ಹೇಳಿಕೆಯನ್ನು ನೀಡಿದೆ. ಏಪ್ರಿಲ್ 22ರ ದಾಳಿಯು ಇಡೀ ದೇಶವನ್ನು ಒಗ್ಗೂಡಿಸಿದೆ. ಹಂತಕರನ್ನು ಪತ್ತೆಹಚ್ಚಲು ಮತ್ತು ಶಿಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಭಾರತದಿಂದ ಪಾಕಿಸ್ತಾನಕ್ಕೆ ತೆರಳುತ್ತಿರುವ ಸಾಮಾನ್ಯರು, ಸಂಕಟದ ಕತೆಗಳು
ಹಾಗೆಯೇ ಮಿಲಿಟರಿ ಕೈಗೊಳ್ಳುವ ಕ್ರಮಗಳು ಭಯೋತ್ಪಾದನೆಯನ್ನು ನಿಗ್ರಹಿಸುವ ಉದ್ದೇಶವನ್ನು ಪೂರೈಸುತ್ತದೆಯೇ ಅಥವಾ ಪ್ರತಿಕೂಲವಾಗಿ ಪ್ರಭಾವ ಬೀರುತ್ತದೆಯೇ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರ ಹೇಳಿದೆ.
ಈ ದಾಳಿ ನಡೆಸಿದವರನ್ನು ಗುರುತಿಸುವುದು ಮತ್ತು ಅಂತಾರಾಷ್ಟ್ರೀಯವಾಗಿ ಆರೋಪಿಗಳನ್ನು ಬಹಿರಂಗಪಡಿಸಲು ಒಂದು ದಾಖಲೆಯನ್ನು ಸಿದ್ಧಪಡಿಸುವುದು ಮೊದಲ ಆದ್ಯತೆಯಾಗಿರಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ವಾಗ್ದಾಳಿ ನಡೆಸಿದೆ. “ಈ ದಾಳಿಗೆ ಕಾರಣವಾದ ಪ್ರಮುಖ ಭದ್ರತಾ ವೈಫಲ್ಯಕ್ಕೆ ಸರ್ಕಾರವೇ ಹೊಣೆ” ಎಂದು ದೂರಿದೆ. “ಆದರೆ ಕಾಶ್ಮೀರದ ಜನರು ಈ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವುದು ಅತ್ಯಂತ ಮಹತ್ವದ ಘಟನೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಜಮ್ಮು ಕಾಶ್ಮೀರದ ಟಿಕೆಟ್ ಬುಕಿಂಗ್ ರದ್ದುಗೊಳಿಸಿ ಹಿಮಾಚಲದತ್ತ ಮುಖ ಮಾಡಿದ ಪ್ರವಾಸಿಗರು
ಭಯೋತ್ಪಾದಕ ದಾಳಿಯ ನಂತರ ಮತಾಂಧ ಶಕ್ತಿಗಳು ಮುಸ್ಲಿಮರು ಮತ್ತು ಕಾಶ್ಮೀರಿಗಳ ವಿರುದ್ಧ ದ್ವೇಷ ಅಭಿಯಾನವು ನಡೆಸುತ್ತಿದೆ. ಜನರನ್ನು ವಿಭಜಿಸುವ ಭಯೋತ್ಪಾದಕರ ಗುರಿಗೆ ಸಹಾಯ ಮಾಡುತ್ತಿದೆ ಎಂದೂ ದೂರಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಕರ್ನಾಟಕದವರೂ ಸೇರಿ ಬಹುತೇಕರು ಪ್ರವಾಸಿಗರು. ಈ ದಾಳಿ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊಣೆ ಹೊತ್ತಿಕೊಳ್ಳುತ್ತಿದ್ದಂತೆ ಭಾರತ-ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿದೆ.
