18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಅತ್ಯುತ್ತಮ ಪ್ರದರ್ಶನದೊಂದಿಗೆ ಮುನ್ನಡೆ ಸಾಧಿಸುತ್ತಿದೆ. ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ 7 ಜಯ ಹಾಗೂ ಒಂದು ಡ್ರಾನೊಂದಿಗೆ ಅಂಕಪಟ್ಟಿಯಲ್ಲಿ ಒಟ್ಟು 15 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ವಿಶೇಷ ಎಂದರೆ ಪಂಜಾಬ್ ಕಿಂಗ್ಸ್ ತಂಡವು ಬರೋಬ್ಬರಿ 11 ವರ್ಷಗಳ ಬಳಿಕ 15 ಅಂಕಗಳನ್ನು ಪಡೆದುಕೊಂಡಿದೆ. ಅಂದರೆ ಕಳೆದ ಹನ್ನೊಂದು ಆವೃತ್ತಿಗಳಲ್ಲಿ 14 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯಲು ಪಂಜಾಬ್ ಪಡೆಗೆ ಸಾಧ್ಯವಾಗಿಲ್ಲ. 2014 ರಲ್ಲಿ 22 ಅಂಕಗಳನ್ನು ಪಡೆದಿದ್ದೇ ಶ್ರೇಷ್ಠ ಸಾಧನೆ.
ಇದಾದ ಬಳಿಕ ಒಮ್ಮೆಯೂ ಪಂಜಾಬ್ ಕಿಂಗ್ಸ್ ತಂಡ 7 ಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದಿರಲಿಲ್ಲ. ಆದರೆ ಈ ಬಾರಿಯ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಇದರೊಂದಿಗೆ ಒಟ್ಟು 15 ಅಂಕಗಳನ್ನು ಪಡೆದು ಪಂಜಾಬ್ ಪಡೆ ಪ್ಲೇಆಫ್ನತ್ತ ಲಗ್ಗೆಯಿಟ್ಟಿದೆ.
2014ರ ಬಳಿಕ ಪಂಜಾಬ್ ಕಿಂಗ್ಸ್ ಪಾಲಿಗೆ ಮರೀಚಿಕೆಯಾಗಿರುವ ಪ್ಲೇಆಫ್ ಸುತ್ತಿಗೇರಲು ಇನ್ನೂ 3 ಪಂದ್ಯಗಳಿವೆ. ಈ ಪಂದ್ಯಗಳಲ್ಲಿ 2 ಜಯ ಸಾಧಿಸಿದರೆ ಶ್ರೇಯಸ್ ಅಯ್ಯರ್ ಪಡೆ ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಖಚಿತವಾಗಲಿದೆ.
ಈ ಸುದ್ದಿ ಓದಿದ್ದೀರಾ? IPL 2025 | ಟೂರ್ನಿಯಿಂದ ಚೆನ್ನೈ ಹೊರಗೆ; ನಿವೃತ್ತಿ ನಿರ್ಧಾರ ಕೈಗೊಳ್ಳುತ್ತಾರಾ ಧೋನಿ?
ಪಂಜಾಬ್ ಕಿಂಗ್ಸ್ ತಂಡದ ಮುಂದಿನ ಪಂದ್ಯಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್ (ಮೇ.8), ಮುಂಬೈ ಇಂಡಿಯನ್ಸ್ (ಮೇ.11) ಹಾಗೂ ರಾಜಸ್ಥಾನ್ ರಾಯಲ್ಸ್ (ಮೇ.16). ಈ ಮೂರು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿದರೆ ಒಟ್ಟು 21 ಅಂಕಗಳೊಂದಿಗೆ ಪ್ಲೇಆಫ್ಗೇರಲಿದೆ.
ಸ್ಟೇಡಿಯಂನ ಆಚೆ ಬಿದ್ದ ಶಶಾಂಕ್ ಸಿಂಗ್ ಸಿಡಿಸಿದ ಸಿಕ್ಸ್
ಈ ಬಾರಿಯ ಆವೃತ್ತಿಯಲ್ಲಿ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬ್ಯಾಟರ್‌ಗಳು ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನೆ ಸಿಡಿಸುತ್ತಿದ್ದಾರೆ. ನಿನ್ನೆ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ಬ್ಯಾಟರ್ ಶಶಾಂಕ್ ಸಿಂಗ್ ಬಾರಿಸಿದ ಸಿಕ್ಸರ್ ಎಲ್ಲರನ್ನೂ ಚಕಿತಗಿಳಿಸಿತು.
ಲಖನೌ ತಂಡದ ವೇಗಿ ಮಯಾಂಕ್ ಯಾದವ್ ಎಸೆದ ಚೆಂಡನ್ನು ಕ್ರೀಡಾಂಗಣದಿಂದ ಹೊರಗೆ ಅಟ್ಟಿದರು. ಪಂಜಾಬ್ ತಂಡದ ಬ್ಯಾಟಿಂಗ್ ಇನಿಂಗ್ಸ್‌ನ 17ನೇ ಓವರ್‌ನ ನಾಲ್ಕನೇ ಎಸೆತವನ್ನು ಶಶಾಂಕ್ ಸಿಂಗ್ ಬಾರಿಸಿದಾಗ ಚೆಂಡು ಕ್ರೀಡಾಂಗಣದಿಂದ ಹೊರಗೆ ಹೋಯಿತು. ಇದನ್ನು ನೋಡಿದ ಪ್ರೇಕ್ಷಕರಿಗೆ ಆನಂದಕ್ಕೆ ಪಾರವೇ ಇರಲಿಲ್ಲ.
ಅಲ್ಲದೆ ಇದೇ ಪಂದ್ಯದಲ್ಲಿ ಲಖನೌ ತಂಡದ ಮಾಯಾಂಕ್ ಯಾದವ್ ತಮ್ಮ 4 ಓವರ್‌ಗಳಲ್ಲಿ ಬರೋಬ್ಬರಿ 60 ರನ್‌ಗಳನ್ನು ಬಿಟ್ಟುಕೊಟ್ಟರು. ಜೋಶ್ ಇಂಗ್ಲಿಸ್ ತಮ್ಮ ಮೊದಲ ಓವರ್‌ನಲ್ಲಿಯೇ ಅವರ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಪ್ರಭ್ಸಿಮ್ರಾನ್ ಸಿಂಗ್ ಎರಡನೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 4 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಪ್ರಭ್ಸಿಮ್ರನ್ ಸಿಂಗ್ 91 ರನ್‌ಗಳ ಇನಿಂಗ್ಸ್ ಆಡಿದರು. ಅವರು 48 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಲಖನೌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 37 ರನ್‌ಗಳ ಅಂತರದಲ್ಲಿ ಪರಾಭವಗೊಂಡಿತು.
-A monstrous six by Shashank Singh
— Jay Indian (@Jayindian12) May 4, 2025
– Shashank Singh scored 33 in 15 ball with 1 six
pic.twitter.com/0DVjJBnJST
ಕ್ರೀಡೆಯ ಮಾಹಿತಿ ಅವಶ್ಯ ಆದರೆ ಕ್ರಿಕೆಟ್ ಸುದ್ಧಿಯೆ ಹೆಚ್ಚಾಯಿತು.. ನಮ್ಮ ಕಳಕಳಿ ಇಷ್ಟೆ ಸಾಧ್ಯವಾದರೆ ಕ್ರಿಕೆಟ್ ಸುದ್ಧಿ ನಿಯಮಿತಗೊಳಿಸಿ ಇತರ ಆಟೋಟಗಳ ಮಾಹಿತಿ ನೀಡಿ. ನಿಮ್ಮ ವಾಹಿನಿ ಕೇವಲ ರಾಜಕೀಯ ವಿಷಯಗಳಲ್ಲಿ ಸಮರ್ಥಿಸುವ ಅಥವಾ ವಿರೋಧಾಭಾಸವಾದದ್ದು ಎಂದು ನನಗನಿಸಿದ್ದು. ಅನೇಕ ಸರ್ಕಾರೀ ಇಲಾಖೆಯ ಇತರೆ ಖಾಸಗೀ ಕಂಪನಿಗಳ ಕರ್ತವ್ಯ ಲೋಪಗಳು ಹೇಳತೀರದಷ್ಟಿದ್ದು ತಿಳಿಯಾಗಿಯೆ ಪ್ರಚುರಪಡಿಸಿ🙏🏻