ಗುಬ್ಬಿ | ಗೃಹ ಸಚಿವರು ಎರಡೂ ಸಮುದಾಯವನ್ನು ಭೇಟಿ ಮಾಡಬೇಕಿತ್ತು : ಶಾಸಕ ಎಂ.ಟಿ.ಕೃಷ್ಣಪ್ಪ.

Date:

Advertisements

ಮಂಗಳೂರು ಗಲಭೆ ಹಿನ್ನಲೆ ಭೇಟಿ ನೀಡಿದ ಗೃಹ ಮಂತ್ರಿ ಪರಮೇಶ್ವರ್ ಅವರು ಒಂದು ಸಮುದಾಯವನ್ನು ಮಾತ್ರ ಮಾತನಾಡಿಸಿದ್ದು ಸರಿಯಿಲ್ಲ. ಮತ್ತೊಂದು ಸಮುದಾಯ ಮೃತ ಶೆಟ್ಟಿ ಅವರ ಮನೆಗೂ ಭೇಟಿ ನೀಡಿದ್ದರೆ ಸಾಮಾಜಿಕ ನ್ಯಾಯ ಕಲ್ಪಿಸಿದಂತೆ ಆಗುತ್ತಿತ್ತು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಎನ್.ಆರ್.ಎಲ್.ಎಂ ಶೆಡ್ ಹಾಗೂ ಬೇಲೂರು ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ವೈಯಕ್ತಿಕ ದ್ವೇಷದ ಘಟನೆ ಆಗಿದ್ದರೂ ಒಂದು ಸಮುದಾಯ ಓಲೈಕೆಯ ಬಗ್ಗೆ ಮತ್ತೊಮ್ಮೆ ಗೃಹ ಸಚವರು ರುಜುವಾತು ಮಾಡಿದಂತಾದ ಈ ಭೇಟಿಯ ತಾರತಮ್ಯ ನೀತಿ ಒಪ್ಪಿಕೊಳ್ಳಲಾಗದು ಎಂದು ಪ್ರತಿಕ್ರಿಯಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿಗಳ ಜನಿವಾರ ತೆಗಿಸುವುದು, ಮಾಂಗಲ್ಯ ಸರ ತೆಗಿಸುವುದು ಸರ್ಕಾರ ನಿಯಮಾವಳಿಯಲ್ಲಿ ಇದ್ದರೆ ಪಾಲಿಸಬೇಕಿದೆ. ಆದರೆ ನಿಯಮ ಇಲ್ಲದೆ ನಡೆದಲ್ಲಿ ಅಲ್ಲಿನ ಸಿಬ್ಬಂದಿಗಳ ಕ್ರಮ ಕೈಗೊಳ್ಳಬೇಕು ಎಂದ ಅವರು ಪರೀಕ್ಷೆ ಬರೆಯುವವಲ್ಲಿ ಪ್ರಾಮಾಣಿಕತೆ ಮರೆಯಾದ ಹಿನ್ನಲೆ ಏನೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisements

ಪಂಚಾಯಿತಿ ವ್ಯಾಪ್ತಿಯಲ್ಲಿ ಅಬಿವೃದ್ದಿ ಕೆಲಸಗಳು ಸಾಕಷ್ಟು ನಡೆದಿದೆ. ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ನರೇಗಾ ಯೋಜನೆ ಬಳಸಿ ಮತ್ತಷ್ಟು ಕೆಲಸ ಸದಸ್ಯರು ಮಾಡಬೇಕು. ಈಗ 8 ಸಾವಿರ ಮೀಟರ್ ಚರಂಡಿ ಮಾಡಲು ಇರುವ ಅವಕಾಶ ಬಳಸಿ ಕೆಲಸ ಮಾಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಕೆಂಪಣ್ಣ, ಉಪಾಧ್ಯಕ್ಷೆ ರೇಷ್ಮಾ, ಸದಸ್ಯರಾದ ಕೃಷ್ಣೇಗೌಡ, ಗುರು ಪ್ರಕಾಶ್, ಲೋಕೇಶ್, ಅನ್ನಪೂರ್ಣ, ಈರಣ್ಣ, ವೆಂಕಟೇಶ್, ಕವಿತಾ, ಮಮತಾ, ಪ್ರಕಾಶ್, ಸುಧಾರಾಣಿ, ಪ್ರೇಮಾ, ಗಂಗಾಧರಗೌಡ, ಸೀತಾರಾಮು ಸಿಂಗ್, ಭಾರತಿ, ನಾಗರಾಜು, ಪಿಡಿಓ ಶ್ರೀದೇವಿ ಬಳ್ಳಳ್ಳಿ, ಗುಮಾಸ್ತರಾದ ವಿಜಯಕುಮಾರಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X