ಜೂಜು (ಇಸ್ಪೀಟು) ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು 52 ಇಸ್ಪೀಟು ಎಲೆಗಳು, ₹10080 ಹಣ ಹಾಗೂ ಜೂಜಿನಲ್ಲಿ ತೊಡಗಿದ್ದ 10 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | 2ನೇ ದಿನಕ್ಕೆ ಕಾಲಿಟ್ಟ ‘ನಮ್ಮ ಸಂವಿಧಾನ ನಮ್ಮ ಕಲರವ’ ಚಿಣ್ಣರ ನಾಟಕೋತ್ಸವ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಿಂದ ದೇವನೂರು ಮಾರ್ಗಮಧ್ಯದಲ್ಲಿ ಇಸ್ಪೀಟು ಆಡ್ಡೆ ಮಾಡಿಕೊಂಡು ಜೂಜಾಟದಲ್ಲಿ ತೊಡಗಿದ್ದ ಕಮಡೊಳ್ಳಿ ಗ್ರಾಮದ 7 ಮಂದಿ, ಶಿರೂರ ಗ್ರಾಮದ ಇಬ್ಬರು ಮತ್ತು ಕುಂದಗೋಳದ ಓರ್ವ ಸೇರಿ 10 ಜನರ ವಿರುದ್ಧ ಕುಂದಗೋಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.